ಕುಂಬ್ರ: ಜೈ ತುಳುನಾಡ್ ವತಿಯಿಂದ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರ ಉದ್ಘಾಟನೆ

0

ಕುಂಬ್ರ: ಜೈ ತುಳುನಾಡ್ (ರಿ) ಪುತ್ತೂರು ವಲಯದ ವತಿಯಿಂದ ʼಬಲೆ ತುಳು ಲಿಪಿ ಕಲ್ಪುಗʼ ಕಾರ್ಯಾಗಾರದ ಉದ್ಘಾಟನೆಯು ಕುಂಬ್ರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಇದರ ಅಧ್ಯಕ್ಷತೆಯನ್ನು ಕುಂಬ್ರ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಆಶಾಲತಾ ರೈ ವಹಿಸಿದರು. ಅಂಗನವಾಡಿ ಕೇಂದ್ರದ ಸಹಾಯಕಿ ರಾಜೀವಿ, ಜೈ ತುಳುನಾಡ್ (ರಿ) ಸಹ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಹಾಗೂ ಸದಸ್ಯರಾದ ಸುಕೇಶ್ ಗೌಡ, ಕಬಕ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಾಬು ಮಾಸ್ಟರ್ ತೆಗ್ಗು ಉಪಸ್ಥಿತರಿದ್ದರು.

ತೃಷಾ ಕುಂಬ್ರ ಅವರ ಪ್ರಾರ್ಥನೆಯಿಂದ ಪ್ರಾರಂಭಿಸಿ, ಕೀರ್ತನಾ ಕುಂಬ್ರ ಎಲ್ಲರನ್ನು ಸ್ವಾಗತಿಸಿದರು. ತುಳು ಲಿಪಿ ಶಿಕ್ಷಕಿ ಚಿತ್ರಾಕ್ಷಿ.ಟಿ ತೆಗ್ಗು ಕಾರ್ಯಕ್ರಮವನ್ನು ನಿರೂಪಿಸಿದರು. 25 ಮಕ್ಕಳ ಜೊತೆಗೆ 4 ಜನ ಹೆತ್ತವರು ತುಳು ಲಿಪಿ ಬರೆದರು. ಮುಂದಿನ 5 ಆದಿತ್ಯವಾರ ನಿರಂತರ ತರಗತಿ ನಡೆಯಲಿದ್ದು, ಆಸಕ್ತರು ಬಂದು ಪಾಲ್ಗೊಳ್ಳಬಹುದು ಎಂದು ಆಯೋಜಕರು ತಿಳಿಸಿದರು.

LEAVE A REPLY

Please enter your comment!
Please enter your name here