ಉಪ್ಪಿನಂಗಡಿ: ಪರಸ್ಪರ ಅರಿತು ಪ್ರೀತಿಯ ಬಾಳುವೆ ನಮ್ಮದಾದಾಗ ಶಾಂತಿ- ಸೌಹಾರ್ದತೆಯ ಸಮಾಜ ನಮ್ಮದಾಗಲು ಸಾಧ್ಯ ಎಂದು ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ರೆ.ಫಾ. ಅಬೆಲ್ ಲೋಬೋ ತಿಳಿಸಿದರು.
ಇಲ್ಲಿನ ರೋಟರಿ ಭವನದಲ್ಲಿ ನಡೆದ ಉಪ್ಪಿನಂಗಡಿ ಜೇಸಿಐಯ 2024ರ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜೇಸಿಐಯಂತಹ ಸಂಸ್ಥೆಗಳು ಶಾಂತಿ- ಸೌಹಾರ್ದತೆ ಮೂಡಿಸಲು ಹುಟ್ಟಿಕೊಂಡ ಸಂಸ್ಥೆಗಳಾಗಿದ್ದು, ಪರರ ಪ್ರೀತಿಗಳಿಸುವುದರೊಂದಿಗೆ ಪರರ ಸೇವೆಯಲ್ಲೂ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿವೆ. ಇದರಲ್ಲಿ ಎಲ್ಲರಿಗೂ ಅವಕಾಶಗಳಿದ್ದು, ವ್ಯಕ್ತಿಯ ವ್ಯಕ್ತಿತ್ವ ಬೆಳೆಯಲು ಇಂತಹ ಸಂಸ್ಥೆಗಳು ಸಹಕಾರಿಯಾಗಿವೆ ಎಂದರು.
ಜೇಸಿಐನ ಮಾಜಿ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ. ಸುವರ್ಣ ಮಾತನಾಡಿ, ಜೇಸಿ ಅಂದರೆ ಆತ್ಮವಿಶ್ವಾಸ ಹಾಗೂ ಭರವಸೆಯ ಬೆಳಕಾಗಿದೆ. ಇದು ಯಾರನ್ನೂ ಬಳಸಿಕೊಳ್ಳುವುದಿಲ್ಲ. ಬದಲಾಗಿ ಬೆಳೆಸುತ್ತದೆ. ಇದಕ್ಕೆ ಸೇರಿದಾಗ ನಾಯಕತ್ವ ಗುಣ ನಮ್ಮದಾಗುವುದಲ್ಲದೆ, ಹೊಸ ಚೈತನ್ಯ ಶಕ್ತಿ ಮೂಡುತ್ತದೆ ಎಂದರು.
ವಲಯ 15ರ 2014ರ ಉಪಾಧ್ಯಕ್ಷ ಶಂಕರ್ ರಾವ್ ಮಾತನಾಡಿ, ಉಪ್ಪಿನಂಗಡಿ ಜೇಸಿಐನಿಂದ ಈ ಬಾರಿ ಉತ್ತಮ ಸಾಧನೆಯಾಗಲಿ. ಹಲವು ಪ್ರಶಸ್ತಿಗಳು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷೆಯಾಗಿ ಪದಗ್ರಹಣ ಸ್ವೀಕರಿಸಿದ ಲವೀನಾ ಪಿಂಟೋ ಮಾತನಾಡಿ, ಎಲ್ಲರ ಸಹಕಾರ ಕೇಳಿದರು.
ವೇದಿಕೆಯಲ್ಲಿ ಮಹಿಳಾ ಜೇಸಿ ಸಂಯೋಜಕಿ ಅನಿ ಮಿನೇಜಸ್, ನಿಕಟಪೂರ್ವಾಧ್ಯಕ್ಷ ಶೇಖರ ಗೌಂಡತ್ತಿಗೆ, ಜೇಸಿಐ ಸಲಹಾ ಸಮಿತಿಯ ಪ್ರಶಾಂತ್ ಕುಮಾರ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧ ಶೆಟ್ಟಿ, ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್, ಹರಿಣಿ ರವೀಂದ್ರ ದರ್ಬೆ, ಕರುಣಾಕರ, ಜೇಸಿಐ ವಲಯಾಧ್ಯಕ್ಷ ಗಿರೀಶ್ ಎಸ್.ಪಿ., ಸಲಹಾ ಸಮಿತಿಯ ಡಾ.ರಾಜಾರಾಮ್ ಕೆ.ಬಿ., ಆನಂದ ರಾಮಕುಂಜ, ಕೇಶವ ರಂಗಾಜೆ, ಡಾ. ಗೋವಿಂದ ಪ್ರಸಾದ ಕಜೆ, ಹರೀಶ್ ನಾಯಕ್ ನಟ್ಟಿಬೈಲ್, ಉಮೇಶ್ ಆಚಾರ್ಯ, ವಿಜಯ ಕುಮಾರ್ ಕಲ್ಲಳಿಕೆ, ಮೋಹನಚಂದ್ರ ಎಂ.ಪಿ., ಚೇರ್‌ಪರ್ಸನ್ ದೀಪಕ್, ಜೇಸಿಗಳಾದ ಚಂದಪ್ಪ ಮೂಲ್ಯ, ಚಂದ್ರಶೇಖರ ಶೆಟ್ಟಿ, ವೀಣಾಪ್ರಸಾದ್ ಕಜೆ, ಜಯಂತಿ ರಂಗಾಜೆ, ನವೀನ್ ಬ್ರಾಗ್ಸ್, ಪ್ರದೀಪ್ ಬಾಕಿಲ, ವಿನೀತ್ ಶಗ್ರಿತ್ತಾಯ, ಸುಧೀರ್ ಕೆ.ಎನ್., ಅಬ್ದುರ್ರಹ್ಮಾನ್ ಯುನಿಕ್, ಮೋನಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಜೇಸಿಐ ಕಾರ್ಯದರ್ಶಿ ಸುರೇಶ್ ವಂದಿಸಿದರು.