ನಗರಸಭಾ ಉಪಚುನಾವಣಾ ಫಲಿತಾಂಶ-ಪ್ರಮುಖರ ಪ್ರತಿಕ್ರಿಯೆ

0

ಹೆಚ್ಚು ಮತಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿ ಗೆಲುವಿನಲ್ಲಿ ಸಮಬಲದ ಸಾಧನೆ
ನಗರಸಭೆ ಚುನಾವಣೆಯಲ್ಲಿ ವಾರ್ಡ್ ನಂ.1ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ದಿನೇಶ್ ಜಯಭೇರಿ ಭಾರಿಸಿದ್ದಾರೆ.ಅದೇ ರೀತಿ ವಾರ್ಡ್ 11ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸುಮಾರು 31 ಮತಗಳ ಅಂತರದಿಂದ ಸೋತಿದ್ದಾರೆ.ಒಂದು ನಮ್ಮ ಪರವಾಗಿದೆ ಒಂದು ಬಿಜೆಪಿ ಪರವಾಗಿದೆ.ಆದರೂ ನಾವು ಹೆಚ್ಚು ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದರಿಂದ ಇಲ್ಲಿ ಪಕ್ಷದ ಹಿನ್ನಡೆ ಎಂದು ಹೇಳಲು ಸಾಧ್ಯವಿಲ್ಲ.ಸ್ವಲ್ಪ ಅಂತರದಿಂದ ಸೋಲನ್ನು ಅನುಭವಿಸಿದ್ದರಿಂದ, ಜನರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ.ಆದರೂ ಸಮಮತದಲ್ಲಿ ನಮ್ಮ ಪಕ್ಷ ಗೆಲುವು ಕಂಡಿದೆ.ಜನರು ಸರಕಾರದ 5 ಗ್ಯಾರಂಟಿಗಳನ್ನು ಅನುಭವಿಸುತ್ತಿದ್ದಾರೆ.ರೂ.2 ಸಾವಿರದ ಗೃಹಲಕ್ಷ್ಮೀ ಯೋಜನೆ, ಉಚಿತ ಕರೆಂಟ್, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಅಕ್ಕಿಯ ಹಣ ಕೊಡುವುದು ಜನರಿಗೆ ವರದಾನವಾಗಿದೆ.ಉಪಚುನಾವಣೆ ಬಂದಾಗ ಅಲ್ಲಿ ಅಭ್ಯರ್ಥಿಗಳು ಸ್ವಂತ ನಿಲುವಿನಿಂದ ಗೆಲುವನ್ನು ಸಾಽಸುತ್ತಾರೆ.ಆದ್ದರಿಂದ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ.ಒಟ್ಟಿನಲ್ಲಿ ಸಮಬಲದಿಂದ ನಗರಸಭೆ ಚುನಾವಣೆ ಫಲಿತಾಂಶ ಕಂಡಿದೆ

ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

ಎಲ್ಲರೊಂದಿಗೆ ಸೇರಿ ವಾರ್ಡ್ ಅಭಿವೃದ್ಧಿಗೆ ಪ್ರಯತ್ನ
ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದೆ.ಈ ಬಾರಿ ಮತ್ತೆ ಅವಕಾಶ ದೊರೆತಿದ್ದು ಜನರು ಆಶೀರ್ವದಿಸಿ ಗೆಲ್ಲಿಸಿದ್ದಾರೆ.ವಾರ್ಡ್‌ನಲ್ಲಿ ಬೀದಿ ದೀಪ, ಚರಂಡಿ, ನೀರಿನ ಸೌಲಭ್ಯಗಳ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತೇನೆ.ವಾರ್ಡ್ ಅಭಿವೃದ್ಧಿಗಾಗಿ ಎಲ್ಲರೊಂದಿಗೆ, ಎಲ್ಲಾ ಧರ್ಮೀಯರಲ್ಲಿಯೂ ಸಮಾನತೆಯೊಂದಿಗೆ ಕೆಲಸ ಮಾಡುತ್ತೇನೆ.ತ್ರಿಕೋನ ಸ್ಪರ್ಧೆಯಾದರೂ ಜನರು ನನ್ನನ್ನು ಗುರುತಿಸಿ ಗೆಲ್ಲಿಸಿರುವುದಕ್ಕೆ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ-

ದಿನೇಶ್ ಶೇವಿರೆ,ವಾರ್ಡ್ 1ರ ನೂತನ ಸದಸ್ಯ

ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ
ಪಾರ್ಕ್ ಅಭಿವೃದ್ಧಿಯೂ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನನ್ನ ವಾರ್ಡ್‌ನಲ್ಲಿ ನಡೆಯಬೇಕಿದೆ.ಪರಾಜಿತ ಅಭ್ಯರ್ಥಿ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ.ಚುನಾವಣೆಯಲ್ಲಿ ಮಾತ್ರ ನಮ್ಮದು ರಾಜಕೀಯ.ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ

ರಮೇಶ್ ರೈ ನೆಲ್ಲಿಕಟ್ಟೆ, ವಾರ್ಡ್ 11ರ ನೂತನ ಸದಸ್ಯ

ದಿನೇಶ್‌ರವರ ಮೂಲಕ ವಾರ್ಡ್‌ನಲ್ಲಿ ಅಭಿವೃದ್ಧಿ
ನೆಹರುನಗರ ವಾರ್ಡ್‌ನಲ್ಲಿ ಕಳೆದ ಬಾರಿ ಸೋತಿದ್ದ ದಿನೇಶ್ ಶೇವಿರೆಯವರಿಗೆ ಈ ಬಾರಿ ಮತದಾರರು ಆಶಿರ್ವಾದ ಮಾಡಿದ್ದು ಗೆಲುವು ಸಾಽಸಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈಯವರ ಕೆಲಸ ಕಾರ್ಯಗಳು ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಪಕ್ಷಕ್ಕೆ ಜಯವಾಗಿದೆ.ನಾವು ವಿಜಯೋತ್ಸವ ಆಚರಿಸದೇ ಜನರಿಗೆ ನೀಡಿದ ಭರವಸೆಯನ್ನು ಶೀಘ್ರವಾಗಿ ಈಡೇರಿಸುವ ಮೂಲಕ ಮುಂದಿನ ದಿನಗಳಲ್ಲಿ ಆ ವಾರ್ಡ್‌ನಲ್ಲಿ ಯಾವ ಪಕ್ಷವೂ ನುಗ್ಗದಂತೆ ಕೆಲಸ ಮಾಡಿ ತೋರಿಸಲಿದ್ದೇವೆ.ಶಾಸಕರ ಅನುದಾನದಲ್ಲಿ ದಿನೇಶ್‌ರವರ ಮೂಲಕ ಅಭಿವೃದ್ಧಿ ಮಾಡಿ ತೋರಿಸಲಿದ್ದೇವೆ

ಪಂಜಿಗುಡ್ಡೆ ಈಶ್ವರ ಭಟ್, ವಾರ್ಡ್-೧ರ ಕಾಂಗ್ರೆಸ್ ಉಸ್ತುವಾರಿ

ರಕ್ತೇಶ್ವರಿ ವಠಾರದಲ್ಲಿ ಸುಳ್ಳು ಆಮಿಷ ನೀಡಿ ಮತದಾರರ ದಾರಿ ತಪ್ಪಿಸಲಾಗಿದೆ
ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ವಾರ್ಡ್ 1 ಮತ್ತು ವಾರ್ಡ್ 11ರಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.ವಾರ್ಡ್ 11ರಲ್ಲಿ ಬಿಜೆಪಿಗೆ ಗೆಲುವಾಗಿದೆ.ಆದರೆ ವಾರ್ಡ್ 1ರಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ.ವಾರ್ಡ್ 11ರ ರಕ್ತೇಶ್ವರಿ ವಠಾರದಲ್ಲಿ ನಮ್ಮ ವಿರೋಧಿ ಅಭ್ಯರ್ಥಿಗಳು ಸುಳ್ಳು ಆಮಿಷ ನೀಡಿ ಮತದಾರರನ್ನು ದಾರಿ ತಪ್ಪಿಸಿದ್ದಾರೆ.ಹಾಗಾಗಿ ಸೋಲಾಗಿದೆ. ಇದು ತಾತ್ಕಾಲಿಕ ಸೋಲು.ಮುಂದೆ ಇದೇ ವಾರ್ಡ್‌ನಲ್ಲಿ ಬಿಜೆಪಿ ಗೆಲುವು ಸಾಽಸುವುದು ಖಚಿತ

ಕೆ.ಜೀವಂಧರ್ ಜೈನ್, ನಿಕಟಪೂರ್ವ ಅಧ್ಯಕ್ಷರು, ನಗರಸಭೆ ಪುತ್ತೂರು

ಪಕ್ಷಕ್ಕೆ ಡ್ಯಾಮೇಜ್ ಮಾಡಿದವರನ್ನು ಒದ್ದು ಹೊರಗೆ ಹಾಕಬೇಕು
ನಗರಸಭೆ ಉಪಚುನಾವಣೆಯಲ್ಲಿ ನೆಲ್ಲಿಕಟ್ಟೆ ವಾರ್ಡ್‌ನಲ್ಲಿ ಬಿಜೆಪಿ ಬಹುಮತ ಪಡೆದಿದೆ.ರಕ್ತೇಶ್ವರಿ ವಠಾರದಲ್ಲಿ ಬಿಜೆಪಿ ಗೆಲುವು ಸಾಽಸಬೇಕಾಗಿತ್ತು.ಆದರೆ ಅಲ್ಲಿ ಯಾವುದೋ ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವೇ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿಗೆ ಸೋಲಾಗಿದೆ.ಇದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ.ಬಿಜೆಪಿ ಯಾವುದೇ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯಲ್ಲ.ನಮ್ಮ ಹಿರಿಯ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಾರ್ಟಿಯಾಗಿದೆ.ಇವತ್ತು ಪಾರ್ಟಿಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಹಲವು ಮಂದಿ, ಪಾರ್ಟಿಯನ್ನು ನಾವು ಮಾಡಿದ್ದು ಎಂದು ಹೇಳುತ್ತಾರೆ.ಅವರು ಏನು ಮಾಡಿದ್ದೂ ಇಲ್ಲ.ಬಿಜೆಪಿಯನ್ನು ಪುನಃ ಕಟ್ಟುವ ಅವಶ್ಯಕತೆ ಏನೂ ಇಲ್ಲ. ಹಿರಿಯರು ಕಟ್ಟಿರುವ ಬಿಜೆಪಿಯನ್ನು ಬೆಳೆಸುವುದು, ಉಳಿಸುವ ಮಹತ್ಕಾರ್ಯ ನಮ್ಮೆಲ್ಲರ ಮೇಲಿದೆ.ಯಾರೆಲ್ಲ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೋ ಅವರೆಲ್ಲರನ್ನು ಒದ್ದು ಹೊರಗೆ ಹಾಕುವುದು ಒಳ್ಳೆಯದು.ಈ ನಿಟ್ಟಿನಲ್ಲಿ ಹಿರಿಯರು ಪ್ರಯತ್ನ ಪಡಬೇಕು.ಇದು ನನ್ನ ವೈಯಕ್ತಿಕ ಅಭಿಪ್ರಾಯ

-ರಾಜೇಶ್ ಬನ್ನೂರು, ಮಾಜಿ ಅಧ್ಯಕ್ಷರು,ಪುರಸಭೆ ಪುತ್ತೂರು

2 ಸ್ಥಾನಗಳಲ್ಲೂ ಗೆಲ್ಲುವ ನಿರೀಕ್ಷೆ ಇತ್ತು
ಉಪ ಚುನಾವಣೆಯಲ್ಲಿ ಎರಡೂ ಸ್ಥಾನಗಳಲ್ಲೂ ಗೆಲ್ಲುವ ನಿರೀಕ್ಷೆಯಿತ್ತು.ಆದರೆ ಒಂದು ಕಡೆ ಗೆದ್ದು ಇನ್ನೊಂದು ಕಡೆ ಸೋಲಾಗಿದೆ.ಬಿಜೆಪಿ ಭದ್ರಕೋಟೆಯಲ್ಲಿ ಗೆದ್ದಿದ್ದೇವೆ.ನೆಲ್ಲಿಕಟ್ಟೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಲ್ಲಿ ಗೆಲ್ಲುವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು.ನೆಲ್ಲಿಕಟ್ಟೆ ವಾರ್ಡ್ ಕಾಂಗ್ರೆಸ್‌ನ ಭದ್ರಕೋಟೆಯಲ್ಲ ಅಲ್ಲಿ ಶಕ್ತಿ ಸಿನ್ಹಾರವರ ವೈಯಕ್ತಿಕ ಗೆಲುವಾಗಿತ್ತು.ಅಲ್ಲಿ ಪಕ್ಷದ ಮಾತು ಕಡಿಮೆ.ನೆಹರುನಗರ ಬಿಜೆಪಿ ಭದ್ರಕೋಟೆಯಲ್ಲ.ಅಲ್ಲಿ ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಗೆದ್ದಿದೆ. ಈ ಸಲ ಕಾಂಗ್ರೆಸ್ ಪುನರಪಿ ಗೆಲುವು ಸಾಧಿಸಿದೆ.ಜನರಪರವಾಗಿರುವ ದಿನೇಶ್ ಕಳೆದ ಸಲ ಸೋತಿದ್ದರೂ ವಾರ್ಡ್‌ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲ್ಲರ ಜನ ಮನ್ನಣೆ ಗಳಿಸಿರುವುದರಿಂದ ಈ ಬಾರಿ ಅವರಿಗೆ ಗೆಲುವಾಗಿದೆ.ಅಲ್ಲದೆ ಶಾಸಕ ಅಶೋಕ್ ಕುಮಾರ್ ರೈಯವರ ಅನುದಾನವೂ ಗೆಲುವಿಗೆ ಸಹಕಾರಿಯಾಗಿದೆ.ಮುಂದಿನ ದಿನಗಳಲ್ಲಿ ನಗರ ವಾರ್ಡ್ ಉಳಿಸಿಕೊಂಡು ನೆಲ್ಲಿಕಟ್ಟೆ ವಾರ್ಡ್‌ನ್ನು ಮತ್ತೆ ಪಡೆಯಲು ಸಿದ್ದರಿದ್ದೇವೆ-

ಮಹಮ್ಮದ್ ಆಲಿ, ಅಧ್ಯಕ್ಷರು ನಗರ ಕಾಂಗ್ರೆಸ್

LEAVE A REPLY

Please enter your comment!
Please enter your name here