ಪುತ್ತೂರು: ಚಾರ್ವಕ ಗ್ರಾಮದ ಅಮರ ಕಾಸ್ಪಾಡಿ ಜೋಡು ದೈವಗಳಿಗೆ ನೂತನವಾಗಿ ನಿರ್ಮಿಸಿದ ‘ಬಂಡಿರಥ’ ವನ್ನು ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಜ.16ರಂದು ಬೆಳಿಗ್ಗೆ ಚಾರ್ವಾಕ ಕ್ಷೇತ್ರಕ್ಕೆ ಕಳುಹಿಸಿಕೊಡಲಾಯಿತು.
ಸುಜಾತ ಲಿಂಗಪ್ಪ ರೈ ಕಾಸ್ಪಾಡಿಗುತ್ತು ಅವರ ಸೇವಾರ್ಥ ರೂಪವಾಗಿ ನಿರ್ಮಾಣಗೊಂಡಿರುವ ನೂತನ ‘ಬಂಡಿರಥ’ವನ್ನು ಬೆಳಿಗ್ಗೆ ಚಾರ್ವಾಕ ಕ್ಷೇತ್ರಕ್ಕೆ ಕಳುಹಿಸುವ ಕೊಡುವ ಸಂದರ್ಭ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ದೈವಸ್ಥಾನದ ಪ್ರಮುಖರಾದ ಅಜಿತ್ ಕುಮಾರ್ ಕಲ್ಲೇಗ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕಾಸ್ಪಾಡಿಗುತ್ತು ದೈವಸ್ಥಾನದ ಆಡಳಿತ ಮೊಕ್ತೇಸರ ಕುಸುಮಾಧರ್ ರೈ, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಅವರು ಪ್ರಾರ್ಥನೆ ಮಾಡಿದರು. ಬಳಿಕ ‘ಬಂಡಿ ರಥ’ದ ಮುಂದೆ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಮೋಹನ್ ಗೌಡ ಇಡ್ಯಡ್ಕ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, 8 ಮನೆತನದ ಬಾರೆಂಗಳ ಗುತ್ತು ಗೋಪಾಲಕೃಷ್ಣ ಪಟೇಲ್, ದಿನೇಶ್ ಇಡ್ಯಡ್ಕ, ಗಾಳಿಬೆಟ್ಡು ಜತ್ತಪ್ಪ ಗೌಡ, ಮೋಹನ್ ಗೌಡ ಇಡ್ಯಡ್ಕ, ನೂಜಿ ಸತೀಶ್ಚಂದ್ರ, ಕರಂದ್ಲಾಜೆ ಲಕ್ಷ್ಮಣ ಗೌಡ, ಕೂರೇಲು, ಕೊಲ್ಯ ಮನೆತದ ಪ್ರಮುಖರು ಹಾಗೂ ಲಿಂಗಪ್ಪ ರೈ ಕುಟುಂಬಸ್ಥರಾದ ರಘುನಾಥ ರೈ, ಹರಿಶ್ಚಂದ್ರ ರೈ, ಜತ್ತಪ್ಪ ರೈ, ಬಾಲಕೃಷ್ಣ ರೈ, ಕರುಣಾಕರ ರೈ, ವಿವಿಧ ರೀತಿಯಲ್ಲಿ ಸಹಕರಿಸಿದ ಕೇಶವ ನಾಯಕ್ ಮತ್ತು ದಿನೇಶ್ ಇಡ್ಯಡ್ಕ, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ರವಿಕಿರಣ್ ನೆಲಪ್ಪಾಲು, ಕಬಕ ಗ್ರಾ.ಪಂ ಸದಸ್ಯ ವಿನಯ ಕುಮಾರ್ ಕಲ್ಲೇಗ, ಚಾರ್ವಕ ಕ್ಷೇತ್ರ ದೈವಗಳ ಪಾತ್ರಿಗಳು, ಬಂಡಿ ರಥದ ಶಿಲ್ಪಿಗಳಾದ ವಾಸುದೇವಾ ಅಚಾರ್ಯ ಕಾಸರಗೋಡು ಮೌವಾರು, ಜಗದೀಶ್ ಅಚಾರ್ಯ ಕೇಪು, ಉಮೇಶ್ ಅಚಾರ್ಯ ಆರ್ಲಪದವು ಉಪಸ್ಥಿತರಿದ್ದರು.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ:
ಕಲ್ಲೇಗದಿಂದ ಹೊರಟ ಬಂಡಿ ರಥಕ್ಕೆ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಬೀದಿಯಲ್ಲಿ ಪೂಜೆ ಸಲ್ಲಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವಾರು ಮಂದಿ ಜೊತೆಗಿದ್ದರು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸಿದರು.