ಪುತ್ತೂರು: ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹದ ಅಂಗವಾಗಿ ಎರಡನೇ ವಿಚಾರ ಸಂಕಿರಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆದರ್ಶ ಪುರುಷ ಶ್ರೀರಾಮ ಎಂಬ ವಿಚಾರಗೋಷ್ಠಿಯನ್ನು ಜ.17ರಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಭಾರತ ಮಾತೆಗೆ ಹಾಗೂ ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಗಂಗಮ್ಮ ಶಾಸ್ತ್ರಿ ಮಣಿಲ ಭಾಗವಹಿಸಿ ಮಾತನಾಡಿ ಜೀವನದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಸಲು ಶ್ರೀಹರಿಯು ರಾಮನ ಜನ್ಮವೆತ್ತಿದ. ರಾಮನು ನುಡಿಗಿಂತ ಹೆಚ್ಚು ನಡೆದು ತೋರಿಸಿದ. ರಾಮನ ಪ್ರತಿ ಹೆಜ್ಜೆಯೂ ನಮಗೆ ಆದರ್ಶ. ರಾಮನ ನಡೆಯನ್ನು ನೋಡಿ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ರಾಮಾಯಣ ನಮಗೆ ಒಂದು ಕನ್ನಡಿ ಇದ್ದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಸಂಚಾಲಕ ಮಹಾದೇವ ಶಾಸ್ರ್ತಿ ಮಣಿಲ ಇವರು ಆಯೋದ್ಯೆಗೆ ತೆರಳುವವರಿಗೆ ಸೂಕ್ತ ಮಾಹಿತಿ ನೀಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ, ಸದಸ್ಯ ಈಶ್ವರಚಂದ್ರ, ಪ್ರಾಚಾರ್ಯ ಚಂದ್ರಕುಮಾರ್, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ್ ಯಸ್ ಆಯೋಜಿಸಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ಯಸ್. ಪ್ರಾರ್ಥಿಸಿ,ಅಟೋಮೊಬೈಲ್ ವಿಭಾಗದ ಉಪನ್ಯಾಸಕ ಗುರುರಾಜ್ ಅತಿಥಿಗಳನ್ನು ಸ್ವಾಗತಿಸಿ, ಸಿವಿಲ್ ವಿಭಾಗದ ಉಪನ್ಯಾಸಕಿ ವೀಣಾ.ಸಿ. ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪುಷ್ಪಾ ಬಿ. ಎನ್ ಕಾರ್ಯಕ್ರಮ ನಿರೂಪಿಸಿದರು.