‘ವಿಟ್ಲಾಧಿಶ್ವರ’ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ

0

ವಿಟ್ಲ: ಡ್ರೀಮ್ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಲಿರುವ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ‘ವಿಟ್ಲಾಧಿಶ್ವರ’ ಭಕ್ತಿಗೀತೆಯ ಪೋಸ್ಟರ್ ನ್ನು ವಿಟ್ಲ ಅರಮನೆಯ ಬಂಗಾರು ಅರಸರು ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಅರ್ಚಕ ಗುರುಪ್ರಸಾದ್, ಪ್ರಮುಖರಾದ ಕೃಷ್ಣಯ್ಯ ವಿಟ್ಲ, ಜಯರಾಮ ಬಲ್ಲಾಳ್ ವಿಟ್ಲ ಅರಮನೆ, ಶ್ರೀಕಂಠ ವರ್ಮಾ, ದಾಮೋದರ, ಮಂಗೇಶ್ ಭಟ್, ರಾಧಾಕೃಷ್ಣ ಏರಂಬು, ಬಾಸ್ಕರ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.


ಲೋಕೇಶ್ ಎ. ಕೆ. ರವರು ಭಕ್ತೀಗೀತೆಯನ್ನು ನಿರ್ಮಿಸಿದ್ದಾರೆ. ಚೇತನ್ ಕೆ. ವಿಟ್ಲ ರವರು ಸಾಹಿತ್ಯ ಬರೆದು ರಾಗ ಸಂಯೋಜಿಸಿ ನಿರ್ದೇಶನ ಮಾಡಿರುತ್ತಾರೆ ,ಅಶ್ವಿನ್ ಪುತ್ತೂರುರವರ ಸಂಗೀತ ನೀಡಿದ್ದಾರೆ. ಮೋನಿಶ್ ವಿಟ್ಲ ಇವರ ಗಾಯನದಲ್ಲಿ ಮೂಡಿ ಬಂದಿರುವ ಈ ಭಕ್ತಿ ಗೀತೆಗೆ ಕವಿತಾ ಸತೀಶ್, ವೀಣಾ ಕೆ, ರೇಷ್ಮಾ. ಟಿ ರವರ ಸಹಗಾಯನವಿದೆ. ಮಿಥುನ್ ರಾಜ್ ವಿದ್ಯಾಪುರ ದ್ವನಿ ಮುದ್ರಣ ಹಾಗೂ ಶಮೀರ್ ಮುಡಿಪು ಮಾಸ್ಟರಿಂಗ್ ಮಾಡಿರುತ್ತಾರೆ. ಛಾಯಾಗ್ರಹಣ , ಸಂಕಲನ ಮನ್ವಿತ್ ಕುಂಡಡ್ಕ ಹಾಗೂ ಪ್ರಚಾರ ಕಲೆ ಚೇತನ್ ಆಚಾರ್ಯ ಪೆರಿಂಜೆ ಇವರದಾಗಿದ್ದು,ಸಹನಿರ್ದೇಶನದ ಜೊತೆಗೆ ಸಮಗ್ರ ನಿರ್ವಹಣೆಯನ್ನು ಅಚಲ್ ವಿಟ್ಲ ಮಾಡಿದ್ದಾರೆ.

LEAVE A REPLY

Please enter your comment!
Please enter your name here