ಕುಣಿತ ಭಜನಾ ಸಂಭ್ರಮದಲ್ಲಿ ತೆಂಕಮಿಜಾರು ಪ್ರಥಮ, ಮಡಂತ್ಯಾರು ದ್ವಿತೀಯ, ಪುತ್ತೂರು ತೃತೀಯ
ಪುತ್ತೂರು: ಶ್ರೀರಾಮ ಭಜನಾ ಮಂದಿರ ಕರುವೇಲು ಬಿಳಿಯೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಕರುವೇಲು ಒಕ್ಕೂಟದ ಸಹಯೋಗದೊಂದಿಗೆ ಶ್ರೀರಾಮ ದೇವರಿಗೆ ನವಕ ಕಲಶಾಭಿಷೇಕ, ಶ್ರೀ ದುರ್ಗಾಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕುಣಿತ ಭಜನಾ ಸಂಭ್ರಮ ಕರುವೇಲು ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಜ.19ರಂದು ವಿವಿಧ ಕಾರ್ಯಕ್ರಮ:
ಕರುವೇಲು ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವದ ಪ್ರಯುಕ್ತ ಜ.19ರಂದು ಬೆಳಿಗ್ಗೆ ಶ್ರೀರಾಮ ದೇವರಿಗೆ ಸಂಪ್ರೋಕ್ಷಣೆ ಪೂಜೆ, ಶ್ರೀರಾಮ ಕಲ್ಪೋಕ್ತ ಪೂಜೆ ಮತ್ತು ನೂತನವಾಗಿ ಬೆಳ್ಳಿಯ ರಾಮ ದೇವರ ಫೋಟೋವನ್ನು ಪೂಜಿಸಿ ಮಂದಿರದ ದೇವರಗುಡಿಗೆ ಅರ್ಪಿಸಲಾಯಿತು. ಶ್ರೀದೇವರ ಪ್ರಸಾದ ವಿತರಿಸಿದ ನಂತರ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ದುರ್ಗಾಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರೆವೇರಿತು. ಈ ಸಂದರ್ಭದಲ್ಲಿ ಸನಾತನ ಸಂಘಟನೆಯವರಿಂದ ಶ್ರೀರಾಮ ದೇವರ ಬಗ್ಗೆ ಧರ್ಮ ಶಿಕ್ಷಣ ನೀಡಲಾಯಿತು.
ಕುಣಿತ ಭಜನೆ ಉದ್ಘಾಟನೆ:
ಜ.20ರಂದು ಸಂಜೆ 28ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಸಂಭ್ರಮ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಭಜನಾ ಸಂಭ್ರಮ ಉದ್ಘಾಟಿಸಿದರು. ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ವೇಣುಗೋಪಾಲ್ ನೋಂಡ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿ ಮೋಹನ್‌ದಾಸ್ ರೈ, ಭಜನಾ ಸ್ಪರ್ಧೆಯ ತೀರ್ಪುಗಾರರಾದ ಸುರೇಶ್ ಕಲ್ಮಾಡಿ, ನರೇಶ್ ಸಸಿಹಿತ್ಲು, ಅರುಣ್ ಕುಂದರ್ ಕಲ್ಯಾಣ್‌ಪುರ ಹಾಗೂ ಬಹುಮಾನದ ಪ್ರಾಯೋಜಕ ರಮೇಶ್ ಬಾಣಬೆಟ್ಟು ಬೆಂಗಳೂರು, ಗೌರವ ಸಲಹೆಗಾರರಾದ ಶೀನಪ್ಪ ಗೌಡ ಕುಂಡಾಜೆ ಮತ್ತು ಮಂಡಳಿಯ ಮಾಜಿ ಅಧ್ಯಕ್ಷ ಗಣೇಶ್ ಪಚ್ಚಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂದಿರದ ಗೌರವಾಧ್ಯಕ್ಷ ತನಿಯಪ್ಪ ಪೂಜಾರಿ ಹೊಸಮನೆ, ಮಂದಿರದ ಅಧ್ಯಕ್ಷ ಸತೀಶ್ ಅಮಾಸೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ, ಕಾರ್ಯಾಧ್ಯಕ್ಷ ಸುರೇಶ್ ಆಚಾರ್ಯ ಕೆಳಗಿನಮನೆ, ಮಂದಿರದ ಉಪಾಧ್ಯಕ್ಷ ತನಿಯಪ್ಪ ನಾಯ್ಕ್ ಹನಂಗೂರು, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಪ್ರಸಾದ್ ಪಚ್ಚಾಡಿ ಸುಪ್ರಭಾ, ಭಜನಾ ಮಂಡಳಿಯ ಅಧ್ಯಕ್ಷ ಶಿವಪ್ರಸಾದ್ ಪಚ್ಚಾಡಿ, ಆಡಳಿತ ಸಮಿತಿಯ ಕಾರ್ಯದರ್ಶಿ ಸಂದೀಪ್ ಕುಂಡಾಜೆ, ಮಂಡಳಿಯ ಕಾರ್ಯದರ್ಶಿ ಜಗದೀಶ್ ಪೊಲ್ಲಾಕೋಡಿ, ವಾರ್ಷಿಕೋತ್ಸವ ಸಮಿತಿಯ ಕಾರ್ಯದರ್ಶಿ ಲಿಂಗಪ್ಪ ಅಮಾಸೆ, ಮಂದಿರದ ಅರ್ಚಕ ಲೋಕೇಶ್ ಮಾಡತ್ತಾರು, ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ರಮೇಶ್ ಹಾಗೂ ಮಂದಿರದ ಆಡಳಿತ ಮಂಡಳಿ, ಭಜನಾ ಮಂಡಳಿ, ಅಭಿವೃದ್ಧಿ ಸಮಿತಿ ಮತ್ತು ವಾರ್ಷಿಕೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಹಲವರು ಭಾಗಿ:
ಮಾಜಿ ಶಾಸಕ ಸಂಜೀವ ಮಠದೂರು, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುದರ್ಶನ್, ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ.ರಾಧ ಶಾಂತಿನಗರ, ಕೇಶವ ಸುಣ್ಣಾನ, ಪ್ರತಾಪ್ ಪೆರಿಯಡ್ಕ, ಅನಿಲ್ ಹೆಗ್ಡೆ ಪಚ್ಚಾಡಿ, ವಂದನ ಶರತ್ ಮುದಲಾಜೆ, ಮಾಯಿಲಪ್ಪ ಗೌಡ ಪಚ್ಚಾಡಿ, ಹರೀಶ್ ಕರುವೇಲು, ತನಿಯಪ್ಪ ನಾಯ್ಕ್ ಕರುವೇಲು, ನಾಗೇಶ್ ಮಾಡತ್ತಾರು, ನವೀನ್ ಮಾಡತ್ತಾರು, ಮಧುಕರ ಕೆಳಗಿನಮನೆ, ಮನೋಹರ್ ಕೆಳಗಿನಮನೆ, ಚೇತನ್ ಪೊಲ್ಲಾಕೋಡಿ, ಹರೀಶ್ ಮುದಲಾಜೆ, ಡೀಕಯ್ಯ ಮೇಗಿನಮನೆ, ಮಹೇಶ್ ಮೇಗಿನಮನೆ, ರಾಜೇಶ್ ಅಲ್ಲಂಗಾರು, ಯೋಗೀಶ್ ಕೆಳಗಿನಮನೆ, ದಾಮೋದರ ಮೇಗಿನಮನೆ, ವಿಜಯ ನಾಯ್ಕ್ ಹೊಳೆಬದಿ, ರುಕ್ಮಯ್ಯ ನಾಯ್ಕ್ ಹೊಳೆಬದಿ, ಪುರುಷೋತ್ತಮ್ ಮರಳ, ಪ್ರವೀಣ್ ಮಾಡತ್ತಾರು, ಅಶೋಕ್ ಗೌಡ ಪಚ್ಚಾಡಿ, ಸಂದೀಪ್ ಹೊಳೆಬದಿ, ವಿಕಾಸ್ ಕೆಳಗಿನಮನೆ, ಆಕಾಶ್ ಕೆಳಗಿನಮನೆ, ಶರತ್ ತಿಪ್ಪಕೋಡಿ, ಹರ್ಷಿತ್ ಪೊಲ್ಲಾಕೋಡಿ, ಹಿತೇಶ್ ಒಡರಿಬೆಟ್ಟು, ನಿಕ್ಷಿತ್ ಪಚ್ಚಾಡಿ, ಅಸ್ಮಿತಾ ಮೇಗಿನಮನೆ, ಶೀಲಾವತಿ, ಮಮತಾ ಮೇಗಿನಮನೆ, ರೇವತಿ ಮೇಗಿನಮನೆ, ಅಕ್ಷಯ ಪಚ್ಚಾಡಿ, ಸುಜಾತ ಪೊಲ್ಲಾಕೋಡಿ, ಹರಿಣಾಕ್ಷಿ ಅಮಾಸೆ, ಜಯಶ್ರೀ ಅಮಾಸೆ, ಮನ್ವಿತ ಮೇಗಿನಮನೆ, ಚಿತ್ರ ಹೊಳೆಬದಿ ಮತ್ತಿತರರು ಭಾಗವಹಿಸಿದ್ದರು.
ಭಜನಾ ವಿಜೇತರಿಗೆ ಪ್ರಶಸ್ತಿ ಪತ್ರ, ಗಿಡ ವಿತರಣೆ
ಕುಣಿತ ಭಜನಾ ಸಂಭ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಭಜನಾ ತಂಡಗಳು ಭಾಗವಹಿಸಿತ್ತು. ರಾಧಾಕೃಷ್ಣ ಭಜನಾ ಮಂಡಳಿ ತೆಂಕ ಮಿಜಾರು ಪ್ರಥಮ ಬಹುಮಾನ ಪಡೆದಿದ್ದು ದ್ವಿತೀಯ ಬಹುಮಾನವನ್ನು ವಿದ್ಯಾ ಸರಸ್ವತಿ ಭಜನಾ ಮಂಡಳಿ ಮಡಂತ್ಯಾರು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಮರಾಠಿ ಯುವ ವೇದಿಕೆ ಭಜನಾ ತಂಡ ಪುತ್ತೂರು ತೃತೀಯ ಬಹುಮಾನ ಪಡೆದುಕೊಂಡಿದೆ. ಭಾಗವಹಿಸಿದ್ದ ಎಲ್ಲಾ ಭಜನಾ ತಂಡಗಳಿಗೂ ಪ್ರಶಸ್ತಿ ಪತ್ರ ಹಾಗೂ ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೀಡಿ ಗೌರವಿಸಲಾಯಿತು. ಸುದ್ದಿ ಲೈವ್ ಪುತ್ತೂರು ಯೂ ಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮ ನೇರಪ್ರಸಾರ ಮಾಡಲಾಗಿತ್ತು.