ಫೆ :18-19 ತುಳುನಾಡ ಜಾತ್ರೆ , ಹಸಿರು ಹೊರೆ ಕಾಣಿಕೆ ಕಾರ್ಯಕ್ರಮ-ಜ.25(ನಾಳೆ ) ಪೂರ್ವಭಾವಿ ಸಭೆ

0

ಪುತ್ತೂರು : ಫೆಬ್ರವರಿ 18 ಮತ್ತು 19 ರಂದು ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ನಡೆಯುವ ತುಳುನಾಡ ಜಾತ್ರೆ ರಥೋತ್ಸವ , ಹೊರೆ ಕಾಣಿಕೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದ್ದು , ಆ ಪ್ರಯುಕ್ತ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿ ಸಭೆಯನ್ನು ಜ.25 ರಂದು ಸಂಜೆ 5 ಕ್ಕೆ ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ನಟರಾಜ ವೇದಿಕೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ತುಳುನಾಡ ಜಾತ್ರೆ ಮತ್ತು ರಥೋತ್ಸವದ ಗಣ್ಯ ಪದಾಧಿಕಾರಿಗಳು ಭಾಗವಹಿಸಲಿದ್ದು , ತಾವೆಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here