ರಾಮಕುಂಜ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ರಾಮಕುಂಜ ಗ್ರಾಮದ ಕಾಜರೊಕ್ಕುದಿಂದ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ರಾಮಕುಂಜ ಪ.ಪೂ.ಕಾಲೇಜಿನ ಮುಂಭಾಗ ಜ.25ರಂದು ರಾತ್ರಿ 1 ಗಂಟೆ ವೇಳೆಗೆ ನಡೆದಿದೆ. ಗಾಯಾಳುಗಳ ಪೈಕಿ ಕೊಯಿಲ ಗ್ರಾಮದ ಪಲ್ಲಡ್ಕ ನಿವಾಸಿ ಅಶೋಕ(38ವ.)ಎಂಬವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಲ್ಲಡ್ಕ ದಿ.ಧರ್ಣಪ್ಪ ಗೌಡರವರ ಪುತ್ರ ಅಶೋಕ ಅವರು ತನ್ನ ಅಪಾಚಿ ಬೈಕ್(ಕೆಎ21 ಇ3048)ನಲ್ಲಿ ಆತೂರಿನಿಂದ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಡೆಗೆ ಬರುತ್ತಿದ್ದ ವೇಳೆ ರಾಮಕುಂಜ ದೇವಸ್ಥಾನದಿಂದ ಆತೂರು ಕಡೆಗೆ ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ ತೀರ್ಥರಾಜ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಪಲ್ಸರ್ ಬೈಕ್(ಕೆಎ19 ಇವೈ 1391) ನಡುವೆ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಗೇಟಿನ ಮುಂಭಾಗದಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಅಪಾಚಿ ಬೈಕ್ ಸವಾರ ಅಶೋಕ ಪಲ್ಲಡ್ಕ, ಪಲ್ಸರ್ ಬೈಕ್ ಸವಾರ ತೀರ್ಥರಾಜ್ ಕಡೆಂಬ್ಯಾಲು ಹಾಗೂ ಪಲ್ಸರ್ ಬೈಕ್‌ನ ಸಹ ಸವಾರ ಯತಿನ್ ಸಬಳೂರು ಎಂಬವರು ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಘಟನೆಯಲ್ಲಿ ಅಪಾಚಿ ಬೈಕ್ ಸವಾರ ಅಶೋಕ ಅವರ ಬಲ ಕಾಲಿಗೆ ತೀವ್ರತರ ಹಾಗೂ ತಲೆಗೆ ಗುದ್ದಿದ ಗಾಯವಾಗಿದೆ. ಪಲ್ಸರ್ ಬೈಕ್‌ನ ಸವಾರ ತೀರ್ಥರಾಜ್ ಹಾಗೂ ಸಹ ಸವಾರ ಯತಿನ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮೂವರನ್ನು ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆ ತರಲಾಗಿದ್ದು ಗಂಭೀರ ಗಾಯಗೊಂಡಿದ್ದ ಅಶೋಕ ಅವರನ್ನು ಪುತ್ತೂರಿನಿಂದ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಲ್ಸರ್ ಬೈಕ್ ಸವಾರ ತೀರ್ಥರಾಜ್ ತೀರಾ ಅಜಾಗರೂಕತೆ ಹಾಗೂ ನೀರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಬೈಕನ್ನು ಚಲಾಯಿಸಿಕೊಂಡು ಬಂದು ಅಪಾಚಿ ಬೈಕ್‌ಗೆ ಡಿಕ್ಕಿಯಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬುಡಲೂರು ನಿವಾಸಿ ಸುಪ್ರೀತ್ ರೈ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪಲ್ಸರ್ ಬೈಕ್ ಸವಾರ ತೀರ್ಥರಾಜ್ ವಿರುದ್ಧ ಠಾಣಾ ಅ.ಕ್ರ: 16/2024. ಕಲಂ:279.337 ಐ.ಪಿ.ಸಿ ಯಂತೆ ಕೇಸು ದಾಖಲಾಗಿದೆ.