ಫೆ.15: ನರಿಮೊಗರು ಎಲಿಕಾ ಶ್ರೀ ವರಮಹಾಲಕ್ಷ್ಮೀ ಸದನದಲ್ಲಿ ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮ, ಮಾಣಚ್ಚಿಲ್ ಸೇವೆ

0

ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ಶ್ರೀ ವರಮಹಾಲಕ್ಷ್ಮೀ ಸದನದಲ್ಲಿ ಪುರೋಹಿತ ಬನಾರಿ ಹರಿಪ್ರಸಾದ ಭಟ್ಟರ ನೇತೃತ್ವದಲ್ಲಿ ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಮಾಣಚ್ಚಿಲ್ ಸೇವೆ ಫೆ.15ರಂದು ನಡೆಯಲಿದೆ. ಫೆ.14ರಂದು ಸಂಜೆ 6 ಗಂಟೆಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ, ರಾಕ್ಷೆಘ್ನ ಹವನ, ರಾತ್ರಿ ಮಂಗಳಾರತಿ ಅನ್ನಸಂತರ್ಪಣೆ ನಡೆಯಲಿದೆ. ಫೆ.15ರಂದು ಬೆಳಿಗ್ಗೆ 9.೦5ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.16ರಂದು ಸಂಜೆ 5 ಗಂಟೆಯಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ ಪ್ರಾರಂಭ, ರಾತ್ರಿ 7 ಗಂಟೆಯಿಂದ ಏಕದಂತ ಭಜನಾ ಮಂಡಳಿ ಪೆರ್ಲ ಇವರಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಭಂಡಾರ ತೆಗೆದು ಶ್ರೀ ಸತ್ಯದೇವತೆ ಪಾಷಾಣಮೂರ್ತಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ಶ್ರೀ ದೈವಗಳ ಪ್ರಸಾದವನ್ನು ಸ್ವೀಕರಿಸುವಂತೆ ಹಾಗೂ ಸಹಾಯಧನ ನೀಡುವವರು 9743170053 ನಂಬರಿಗೆ ಗೂಗಲ್ ಪೇ, ಫೋನ್‌ಪೇ ಮಾಡಬಹುದು ಎಂದು ದೇವಾನಂದ ಭಟ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here