ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ಚೆಕ್ ವಿತರಣೆ

0

ನೆಲ್ಯಾಡಿ: ಒಕ್ಕಲಿಗ ಸ್ವ ಸಹಾಯ ಸಂಘಗಳ ಕೊಣಾಲು ಒಕ್ಕೂಟದ ಶ್ರೀ ನಾಗಡೆಬ್ಬೇಲಿ ಸಂಘದ ಸದಸ್ಯೆ ಲೀಲಾವತಿ ಇವರ ಗಂಡ ಯಾದವ ಗೌಡರು ಇತ್ತೀಚೆಗೆ ಕ್ಯಾನ್ಸರ್ ಖಾಯಿಲೆಯಿಂದ ನಿಧನ ಹೊಂದಿದ್ದು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ನೀಡುವ ಮರಣ ಸಾಂತ್ವನ ಸಹಾಯಧನದ ಚೆಕ್ಅನ್ನು ಕೊಣಾಲು ಒಕ್ಕೂಟದ ಮಾಜಿ ಅಧ್ಯಕ್ಷ ನೋಣಯ್ಯ ಗೌಡ ಡೆಬ್ಬೇಲಿ, ನೂತನ ಅಧ್ಯಕ್ಷ ಲಕ್ಷ್ಮಣ ಗೌಡ ಗೌರ್ಲೆ, ಯುವಘಟಕದ ಅಧ್ಯಕ್ಷ ಗಂಗಾಧರ ಗೌಡ ಕೋಲ್ಪೆ, ಕಾರ್ಯದರ್ಶಿ ಲಲಿತ ತಿರ್ಲೆ ಇವರುಗಳು ಮೃತರ ಪತ್ನಿ ಲೀಲಾವತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸುಮಲತಾ, ಪ್ರೇರಕರಾದ ಪರಮೇಶ್ವರ ಗೌಡ ಕೊಂಬಾರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here