ಸೇರಾಜೆ-ಕುದುಮಾನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ನಾಗಪ್ರತಿಷ್ಠೆ

0

ಪುತ್ತೂರು:ನರಿಮೊಗರು ಗ್ರಾಮದ ಸೇರಾಜೆಯಲ್ಲಿರುವ ಕುದುಮಾನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ತರವಾಡು ಮನೆ ಗೃಹಪ್ರವೇಶ, ನಾಗ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶದ ಅಂಗವಾಗಿ ಫೆ.29ರಂದು ನಾಗಪ್ರತಿಷ್ಠೆ ನಡೆಯಿತು.
ವೇ.ಮೂ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಗಳ ನೇತೃತ್ವದಲ್ಲಿ, ವೇ.ಮೂ ನಾರಾಯಣ ಐತಾಳ್‌ರವರ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಫೆ.28ರಂದು ಸಂಜೆ ನಾಗಬನದಲ್ಲಿ ಪ್ರಾರ್ಥನೆ, ಸ್ಥಳಶುದ್ಧಿ, ವಾಸ್ತು ರಕ್ಷೋಘ್ನ, ವಾಸ್ತು ಬಲಿ, ದಿಕ್ಪಾಲ ಬಲಿ, ಬಿಂಬಾದಿವಾಸ ರಕ್ಷೆ ನಡೆಯಿತು. ಫೆ.29ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಹೋಮ, ಕಲಶಪೂಜೆ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ತರವಾಡು ಮನೆ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ನಾಳೆ(ಮಾ.1) ದೈವಗಳ ಪ್ರತಿಷ್ಠೆ, ಗೃಹಪ್ರವೇಶ:
ಮಾ.1ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ, ಮುಡಿಪು ಪೂಜೆ, ದೈವಗಳ ಪ್ರತಿಷ್ಠೆ, ತರವಾಡು ಮನೆ ಗೃಹಪ್ರವೇಶ, ಮಧ್ಯಾಹ್ನ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶೀರ್ವಚನ ನೀಡಲಿದ್ದಾರೆ. ನಂತರ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ

LEAVE A REPLY

Please enter your comment!
Please enter your name here