ತಿಂಗಳಾಡಿ: ಕೆರೆಗೆ ಬಿದ್ದು ಕಿರಣ್ ರೈ ನಿಧನ

0

ಪುತ್ತೂರು: ಈಜಲು ಕೆರೆಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿಯ ಪಟ್ಟೆಯಲ್ಲಿ ಮಾ.11ರಂದು ಸಂಜೆ ನಡೆದಿದೆ. ಕಡಬ ಕರ್ಮಾಯಿ ನಿವಾಸಿ ಕಿರಣ್ ರೈ (40ವ) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಸಂಜೀವ ರೈ ಎಂ.ರವರ ಪುತ್ರಿ ಮಮತಾರವರನ್ನು ವಿವಾಹವಾಗಿದ್ದು ಪ್ರಸ್ತುತ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮಾ.11ರಂದು ಸಂಜೆ ತೋಟದ ಕೆರೆಗೆ ನೀರು ತರಲೆಂದು ಹೆಂಡ್ತಿಯೊಂದಿಗೆ ತೆರಳಿದ್ದು, ಆ ಬಳಿಕ ನಾನು ಕೆರೆಯಲ್ಲಿ ಈಜಾಡುತ್ತೇನೆ ಎಂದು ಹೇಳಿ ಕೆರೆಗೆ ಇಳಿದವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಿರಣ್ ರೈಯವರ ಸ್ವಂತ ಮನೆ ಕಡಬದ ಕರ್ಮಯಿಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here