ಬೊಳ್ವಾರಿನಲ್ಲಿ ಫೀನಿಕ್ಸ್ ಹೋಮಿಯೋಪಥಿ ಕ್ಲಿನಿಕ್ ಶುಭಾರಂಭ

0

ಪುತ್ತೂರು:ಹೋಮಿಯೋಪಥಿ ವೈದ್ಯ ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ರವರ ನೂತನ ಕ್ಲಿನಿಕ್ ಫೀನಿಕ್ಸ್ ಹೋಮಿಯೋಪಥಿ ಕ್ಲಿನಿಕ್ ಬೊಳ್ವಾರಿನಲ್ಲಿ ಮಾ.13 ರಂದು ಶುಭಾರಂಭಗೊಂಡಿತು.

ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ನೂತನ ಕ್ಲಿನಿಕ್ ಗೆ ಪವಿತ್ರ ಜಲ ಸಿಂಪಡಿಸಿ, ಆಶೀರ್ವಚಿಸಿ ಮಾತನಾಡಿ, ಬಹಳ ವರ್ಷಗಳ ಹಿಂದೆ ಪುತ್ತೂರಲ್ಲಿ ಫಾ.ಪತ್ರಾವೋ ಆಸ್ಪತ್ರೆ ಜನರ ಸೇವೆಗೆ ಇತ್ತು. ಪ್ರಸ್ತುತ ಫಾ.ಪತ್ರಾವೋ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಜನರನ್ನು ಆರೋಗ್ಯವಂತರನ್ನಾಗಿ ಮಾಡುವ ಸೇವೆಯಲ್ಲಿ ನಿರತವಾಗಿವೆ. 

ಕ್ಲಿನಿಕ್ ಗೆ ಬಂದವರನ್ನು ನಗುಮುಖದಿಂದ ಮಾತನಾಡಿ ಜನರನ್ನು ಆರೋಗ್ಯವಂತರನ್ನಾಗಿ ಮಾಡುವಂತಾಗಲಿ. ಜನರ ಸೇವೆ ಮಾಡಲು ಅವಿಲ್ ರವರಿಗೆ ಮತ್ತಷ್ಟು ಆಧಾರ ಹಾಗೂ ಆಶೀರ್ವಾದ ದೇವರು ಕರುಣಿಸಲಿ ಎಂದರು.ಈ ಸಂದರ್ಭದಲ್ಲಿ ವೈದ್ಯ ಡಾ.ಅವಿಲ್ ಲೆನ್ ಗೊನ್ಸಾಲ್ವಿಸ್ ರವರ ತಂದೆ ಅಲ್ವಿನ್ ಗೊನ್ಸಾಲ್ವಿಸ್, ತಾಯಿ ಲೋನಾ ಡೈನಾ ಮಾರ್ಟಿಸ್ , ಹಾಗೂ ಅವರ ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here