ಚೆಂಡೆ ಬ್ಯಾಂಡಿನೊಂದಿಗೆ ಬಿಜೆಪಿ ಕಾರ್ಯಕರ್ತನ ಮನೆಗೆ ತೆರಳಿ ಶಾಸಕರ ಅನುದಾನ,ಕಾಮಗಾರಿ ಮಾಹಿತಿ ನೀಡಿದ್ದ ಪ್ರಕರಣಮನೆಗೆ ಅಕ್ರಮ ಪ್ರವೇಶ,ಬೆದರಿಕೆ-ದೂರು:೮ ಆರೋಪಿಗಳ ಬಂಧನ-ಜಾಮೀನು

0

ಪುತ್ತೂರು:ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನ ಮತ್ತು ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯ ಬ್ಯಾನರ್ ಪ್ರದರ್ಶಿಸುತ್ತಾ ಚೆಂಡೆ,ಬ್ಯಾಂಡಿನೊಂದಿಗೆ ಶಾಸಕರ ವಾರಿಯರ‍್ಸ್ ತಂಡ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಕೋಷ್ಟದ ಸದಸ್ಯ ತಾರಿಗುಡ್ಡೆಯ ಜಯಾನಂದ ಕೆ.ಎಂಬವರ ಮನೆಗೆ ತೆರಳಿದ್ದ ಘಟನೆಗೆ ಸಂಬಂಧಿಸಿ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಠಾಣೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಕಂಬಳಬೆಟ್ಟು ನಿವಾಸಿ ಗೋಪಾಲಕೃಷ್ಣ ಶೆಟ್ಟಿ ಎಂಬವರ ಪುತ್ರ ಸುಶಾಂತ್ ಶೆಟ್ಟಿ, ಕಾಣಿಯೂರು ಪಾತಾಜೆ ನಿವಾಸಿ ಪ್ರಜ್ವಲ್ ರೈ, ವಳತ್ತಡ್ಕ ಮಹಾಬಲ ರೈ ಅವರ ಪುತ್ರ ಸನತ್ ರೈ, ಬನ್ನೂರು ನಿವಾಸಿ ವೀರರಾಜ್ ಅರಸ್ ಅವರ ಪುತ್ರ ಸರ್ವೇಶ್ ಅರಸ್, ಗೋಪಾಲಕೃಷ್ಣ ಎಂಬವರ ಪುತ್ರ ಸುಮಿತ್ ಶೆಟ್ಟಿ, ಉಜ್ರುಪಾದೆ ನಿವಾಸಿ ಪೂವಪ್ಪ ನಾಯ್ಕ್ ಎಂಬವರ ಪುತ್ರ ರೋಹಿತ್, ಸಾಮೆತ್ತಡ್ಕ ಗೋಪಾಲಕೃಷ್ಣ ಎಂಬವರ ಪುತ್ರ ಅಖಿಲ್, ಆರ್ಯಾಪು ದಾಮೋದರ್ ರೈ ಎಂಬವರ ಪುತ್ರ ಕೀರ್ತನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಗೆ ರಾತ್ರಿ ವೇಳೆಯೇ ಜಾಮೀನು ಮಂಜೂರುಗೊಂಡಿದೆ.

ಶಾಸಕ ಅಶೋಕ್ ಕುಮಾರ್ ರೈಯವರು ಸುಮಾರು ೧೪೦೦ ಕೋಟಿ ರೂ.ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಜಯಾನಂದ ಅವರು ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಈ ಕುರಿತು ವ್ಯಂಗ್ಯವಾಗಿ ಬರೆಯುತ್ತಿದ್ದಾರೆ ಎಂದು ಎಆರ್ ವಾರಿಯರ‍್ಸ್ ತಂಡದ ಕಾರ್ಯಕರ್ತರು, ಚೆಂಡೆ, ಬ್ಯಾಂಡಿನೊಂದಿಗೆ ಶಾಸಕರು ತಂದಿರುವ ಅನುದಾನ ಮತ್ತು ಆಗಿರುವ ಕಾಮಗಾರಿಗಳ ವಿವರಗಳಿದ್ದ ಬ್ಯಾನರ್ ಪ್ರದರ್ಶಿಸುತ್ತಾ ಜಯಾನಂದ ಅವರ ಮನೆ ಬಳಿಗೆ ತೆರಳಿದ್ದರು.ಈ ಸಂದರ್ಭ ಅಲ್ಲಿ ಚರ್ಚೆಗಳಾಗಿ,ಮಾತಿನ ಚಕಮಕಿ ನಡೆದಿತ್ತು.ಬಳಿಕ ವಾರಿಯರ‍್ಸ್ ತಂಡ ಅಲ್ಲಿಂದ ವಾಪಸಾಗಿತ್ತು.ಆ ನಂತರದ ಬೆಳವಣಿಗೆಯಲ್ಲಿ,ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಱಶ್ರೀ ಗುರುಕೃಪಾೞದ ಕೃಷ್ಣಪ್ಪ ಪೂಜಾರಿಯವರ ಪುತ್ರ ಜಯಾನಂದ ಕೆ.(೪೧ವ.)ಅವರು ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು.ಱತಾನು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಸದಸ್ಯನಾಗಿದ್ದು ಮಾ.೧೭ರಂದು ಸಂಜೆ ೪.೩೦ರ ವೇಳೆಗೆ ಮನೆಯೊಳಗೆ ಏಕಾಏಕಿಯಾಗಿ ಪ್ರಜ್ವಲ್ ರೈ, ಸನತ್ ರೈ ಸಹಿತ ಸುಮಾರು ೧೫ ಮಂದಿ, ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್ ಪ್ರದರ್ಶಿಸುತ್ತಾ, ಚೆಂಡೆಗಳನ್ನು ಜೋರಾಗಿ ಬಡಿಯುತ್ತಾ ಅಕ್ರಮ ಪ್ರವೇಶ ಮಾಡಿ ಅಸಭ್ಯ ವರ್ತನೆ ತೋರಿದ್ದಲ್ಲದೆ, ನನಗೆ ಹಾಗೂ ಮನೆಯಲ್ಲಿದ್ದ ವೃದ್ಧ ತಾಯಿ,ಪತ್ನಿ, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಯೊಡ್ಡಿರುವುದಾಗಿೞ ಆರೋಪಿಸಿದ್ದರು.ಸೆಕ್ಷನ್ ೪೪೮,೧೪೩,೧೪೭,೫೦೪,೫೦೬, ಜೊತೆಗೆ ೧೪೯ ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ೮ ಆರೋಪಿಗಳನ್ನು ಬಂಧಿಸಿದ್ದರು.

ಕಾಮಗಾರಿ ವಿವರ ನೀಡಿ, ಅಪಪ್ರಚಾರ ಮಾಡದಂತೆ ಎಚ್ಚರಿಕೆ ನೀಡಿ ಬಂದಿದ್ದರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈಯವರು ಶಾಸಕರಾದ ೧೦ ತಿಂಗಳಿನಲ್ಲಿ ಅಭಿವೃದ್ಧಿಯ ಪರ್ವವನ್ನೇ ನಡೆಸಿದ್ದಾರೆ.ಸುಮಾರು ೧೪೭೪.೨೯ ಕೋಟಿ ರೂಪಾಯಿಗಳ ದಾಖಲೆಯ ಅನುದಾನವನ್ನು ಪುತ್ತೂರು ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಿದ್ದಾರೆ.ಈ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸುವ ರೀತಿಯಲ್ಲಿ ತಾರಿತ್ತಡಿ ನಿವಾಸಿ ಜಯಾನಂದ ಬಂಗೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ವ್ಯಂಗ್ಯ ರೀತಿಯಲ್ಲಿ ಬರಹಗಳನ್ನು ಬರೆದು ಅನುದಾನ ಬಿಡುಗಡೆ ಆಗಿಲ್ಲ,ಕಾಮಗಾರಿಗಳ ವಿವರ ಕೊಡಿ ಎಂಬುದಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದುದನ್ನು ಗಮನಿಸಿದ ಶಾಸಕರ ಅಭಿಮಾನಿ ಬಳಗದ ಸದಸ್ಯರು ಬ್ಯಾಂಡ್ ಮೂಲಕ ಜಯಾನಂದರ ಮನೆಗೆ ತೆರಳಿ ಕಾಮಗಾರಿಗಳ ವಿವರದ ಫ್ಲೆಕ್ಸ್ ಅನ್ನು ಓದಿಸಿ,ಇನ್ನು ಮುಂದೆ ಅಪಪ್ರಚಾರ ಮಾಡಬಾರದು ಎಂಬುದಾಗಿ ಎಚ್ಚರಿಕೆ ನೀಡಿ ಬಂದಿರುತ್ತಾರೆ ಎಂದು, ಜಯಾನಂದ ಅವರ ಮನೆಗೆ ಹೋದ ವಾರಿಯರ‍್ಸ್ ತಂಡದವರ ಪರವಾಗಿ ಸಾಮಾಜಿಕ ಜಾಲ ತಾಣದಲ್ಲಿ ವರದಿ ಪ್ರಸಾರವಾಗಿತ್ತು.

LEAVE A REPLY

Please enter your comment!
Please enter your name here