ಅಕ್ಷಯ ಕಾಲೇಜಿನಲ್ಲಿ ಅಕ್ಷಯ ವೈಭವ ‘ಫ್ಯಾಷನ್ ಶೋ’

0

ಅಕ್ಷಯ ಕಾಲೇಜು ಪ್ರತಿಭೆಯನ್ನು ಪೋಷಿಸುತ್ತಿದೆ-ಪ್ರದೀಪ್ ಬಡೆಕ್ಕಿಲ

ಪುತ್ತೂರು; ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣವಾಗುವುದು ಆತನ ವ್ಯಕ್ತಿತ್ವದಿಂದ. ಅಕ್ಷಯ ಕಾಲೇಜು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಮಾಡುವುದಲ್ಲದೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಪೋಷಿಸುತ್ತಾ ಬಂದಿರುತ್ತದೆ ಎಂದು ಬಿಗ್ ಬಾಸ್ ಹಿನ್ನಲೆ ಧ್ವನಿ ಕಲಾವಿದ, ನಿರೂಪಕ ಪ್ರದೀಪ್ ಬಡೆಕ್ಕಿಲರವರು ಹೇಳಿದರು.

ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಜರಗುತ್ತಿರುವ ‘ಅಕ್ಷಯ ವೈಭವ’ ಕಾರ್ಯಕ್ರಮದಡಿಯಲ್ಲಿ ಮಾ.22 ರಂದು ಡಿ ವಾಕ್ ಹೆಸರಿನಲ್ಲಿ ಜರಗಿದ ‘ಫ್ಯಾಷನ್ ಶೋ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿರ್ದೇಶಕ ಹಾಗೂ ಸಿನೆಮಾಟೊಗ್ರಾಫರ್ ಪ್ರಖ್ಯಾತ್ ನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಹಾಗೂ ದೂರದೃಷ್ಟಿತ್ವದ ಯೋಜನೆಯಿಂದ ಗ್ರಾಮೀಣ ಪ್ರದೇಶವಾದ ಪುತ್ತೂರಿನಲ್ಲಿ ಜಯಂತ್ ನಡುಬೈಲುರವರು ಉದ್ಯೋಗ ಪೂರಕವಾದ ಕೋರ್ಸ್ ಗಳನ್ನು ಆರಂಭಿಸಿರುತ್ತಾರೆ. ಲೋಕವೇ ಫ್ಯಾಷನ್ ಲೋಕಕ್ಕೆ ಮಾರು ಹೋಗಿದ್ದು, ಈ ಫ್ಯಾಷನ್ ಕೋರ್ಸ್ ನಲ್ಲಿ ಅವಕಾಶ ಜಾಸ್ತಿ ಇದೆ ಎಂದರು.

ತುಡರ್ ತುಳು ಚಿತ್ರದ ನಟ ಸಿದ್ಧಾರ್ಥ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೇಲೆ ಬರಬೇಕಾದರೆ ಬದುಕಿನಲ್ಲಿ ಭರವಸೆ, ಕಠಿಣ ಪರಿಶ್ರಮ ಬಹಳ ಮುಖ್ಯ. ಫಿಲ್ಮ್ ಇಂಡಸ್ಟ್ರೀಸ್ ನಲ್ಲಿ ಡಿಸೈನರ್ ಗಳಿಗೆ ಅನುಪಮ ಅವಕಾಶವಿದೆ. ನಾನೂ ಕೂಡ ಓರ್ವ ಮಾಡೆಲ್. ಪ್ರೇಕ್ಷಕರು ತುಳು ಸಿನೆಮಾಗಳಿಗೆ ಪ್ರೋತ್ಸಾಹ ನೀಡಿ ಎಂದರು.

2022ರ ಮಿಸ್ ಕರ್ನಾಟಕ ಹಾಗೂ ಪ್ರೊಪ್ ಹಂಟ್ ರಿಯಾಲ್ಟೀಸ್ ಇದರ ಮ್ಯಾನೇಜಿಂಗ್ ಪಾಲುದಾರರಾಗಿರುವ ಕಿಂಜಲ್ ಎನ್. ಮಾತನಾಡಿ, ಮಂಗಳೂರಿನಲ್ಲಿ ನಡೆದ ಮಿಸ್ ಹಾಗೂ ಮಿಸ್ಟರ್ ಮಂಗಳೂರು ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಯಂತ್ ನಡುಬೈಲುರವರು ಸಂಪೂರ್ಣ ಸಹಕಾರ ನೀಡಿದ್ದರು. ಅಕ್ಷಯ ಕಾಲೇಜು ಪ್ರತಿಭೆಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದು ಪುತ್ತೂರು ಪರ್ಲ್ ಸಿಟಿಗೆ ಮತ್ತೊಂದು ಕಿರೀಟವೆನಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜು ವ್ಯವಸ್ಥಾಪಕಿ ನಿರ್ದೇಶಕಿ ಕಲಾವತಿ ಜಯಂತ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜು ಕಾರ್ಯಪ್ರವೃತ್ತವಾಗಿದೆ ಎಂದರು.

ಮಂಗಳೂರಿನ ಫ್ಲಾನೆಟ್ಸ್ ಪ್ರೊಫೆಷನಲ್ಸ್ ಸಲೂನ್ ಗ್ರೂಪ್ಸ್ ಮಾಲಕ ಪ್ರಭಾಕರ ಶೆಟ್ಟಿ, ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಕಲಾವಿದ ವಿ.ಜೆ ಡಿಕ್ಸನ್, ಫ್ಯಾಷನ್ ಮಾಡೆಲ್ ಯಶಸ್ವಿನಿ ದೇವಾಡಿಗ, ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕೃತಿ ಪ್ರಾರ್ಥಿಸಿದರು. ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಕೋರ್ಸ್ ಗಳ ಬಗ್ಗೆ ತಿಳಿಸಿದರು. ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಸ್ವಾಗತಿಸಿ, ಕಾಲೇಜಿನ ಫ್ಯಾಷನ್ ಡಿಸೈನಿಂಗ್ ಉಪನ್ಯಾಸಕಿ ಹಾಗೂ ಸಂಯೋಜಕಿ ದೀಪ್ತಿ ವಂದಿಸಿದರು. ಉಪನ್ಯಾಸಕರಾದ ಕಿಶೋರ್ ಕುಮಾರ್, ದೀಕ್ಷಾ, ರೋಶನ್ ಕುವೆಲ್ಲೋ, ಅನುಷಾ, ರಕ್ಷಣ್ ಟಿ.ಆರ್, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಪಿ.ವಿ ನಾರಾಯಣನ್, ಕೃಷ್ಣಪ್ಪ ಕೆ.ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಪನ್ಯಾಸಕರಾದ ಮೇಘಶ್ರೀ, ಪ್ರತೀಕ್ ಶೆಟ್ಟಿ, ಗ್ರಂಥಪಾಲಕಿ ಪ್ರಭಾವತಿರವರು ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ರಶ್ಮಿ ಕೆ. ಕಾರ್ಯಕ್ರಮ ನಿರೂಪಿಸಿದರು.

163+23 ವಿದ್ಯಾರ್ಥಿಗಳಿಂದ ರ್ಯಾಂಪ್ ವಾಕ್..
ಕಾರ್ಯಕ್ರಮದಲ್ಲಿ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದೊಂದಿಗೆ ಇತರ ವಿಭಾಗದ ಕೋರ್ಸ್ ಗಳಲ್ಲಿನ 163 ವಿದ್ಯಾರ್ಥಿಗಳು ಅಲ್ಲದೆ ಹೊರ ಕಾಲೇಜಿನ 23 ವಿದ್ಯಾರ್ಥಿಗಳು ಹೀಗೆ ಒಟ್ಟಾಗಿ 27 ತಂಡಗಳಿಂದ ಆಕರ್ಷಕ ವಸ್ತ್ರವಿನ್ಯಾಸದೊಂದಿಗೆ ರ್ಯಾಂಪ್ ವಾಕ್ ನೆರವೇರಲ್ಪಟ್ಟಿತು. ಇದರ ಜೊತೆಗೆ 47 ಮಂದಿ ಪುಟ್ಟ ಮಕ್ಕಳು, ಮಿಸ್ ಕರ್ನಾಟಕ, ಮಿಸ್ಟರ್ ಕರ್ನಾಟಕ, ಕೋಸ್ಟಲ್ ಕರ್ನಾಟಕ, ತುಳುನಾಡು ಹೀಗೆ ಪ್ರತಿಭಾನ್ವಿತರು ಫ್ಯಾಷನ್ ಶೋನಲ್ಲಿ ಪಾಲ್ಗೊಂಡರು.

ನೃತ್ಯಧಾರೆ..
ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ವಿಶ್ವಕಲಾ ನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಸಂಸ್ಥೆಯ ವಿದುಷಿ ನಯನಾ ವಿ.ರೈ, ವಿದುಷಿ ಸ್ವಸ್ತಿಕಾ ಶೆಟ್ಟಿರವರ ನೇತೃತ್ವದಲ್ಲಿ “ನೃತ್ಯಧಾರೆ” ನಡೆಯಿತು.

LEAVE A REPLY

Please enter your comment!
Please enter your name here