ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ನಲ್ಲಿ ಯು.ಕೆ.ಜಿ ಮಕ್ಕಳ ಗ್ರಾಜ್ಯುವೇಶನ್ ಡೇ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ನಲ್ಲಿ ಮಾ.25 ರಂದು ಯು. ಕೆ.ಜಿ ಮಕ್ಕಳ ಗ್ರಾಜ್ಯುವೇಶನ್ ಡೇ ಆಚರಿಸಲಾಯಿತು. ಯು .ಕೆ .ಜಿ ಮಕ್ಕಳು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಪ್ರಾಥಮಿಕ ಶಿಕ್ಷಣದ ಪ್ರಾರಂಭಿಕ ಹಂತವನ್ನು ತಲುಪಿದ ಸಂಭ್ರಮದಿಂದ ಘಟಿಕೋತ್ಸವದ ಉಡುಪುಗಳನ್ನು ಧರಿಸಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿ, ಮಕ್ಕಳಿಗೆ ಶುಭ ಹಾರೈಸಿದರು.ಆಡಳಿತಾಧಿಕಾರಿ ಆನಂದ ಎಸ್.ಟಿ, ಪ್ರಾಥಮಿಕ ಮುಖ್ಯಶಿಕ್ಷಕಿ ಲೋಹಿತ. ಎ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ. ಯು.ಎನ್, ಶಿಕ್ಷಕರು,ಪೋಷಕರು, ಸಿಬ್ಬಂದಿಗಳು ಭಾಗವಹಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಭವ್ಯ. ಜಿ ವಂದಿಸಿದರು.

LEAVE A REPLY

Please enter your comment!
Please enter your name here