85 ವರ್ಷ ಮೇಲ್ಪಟ್ಟ, ವಿಶೇಷ ಚೇತನರಿಗೆ ಮನೆ ಮನೆ ಮತದಾನ ಪೂರ್ಣ

0

ಏ.20, 22ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಒಇಡಿಯವರಿಗೆ ಮತದಾನ
ಚುನಾವಣಾ ಕರ್ತವ್ಯ ನಿರತ ಅಧಿಕಾರಿ/ ಸಿಬ್ಬಂದಿಗಳಿಗೆ (ವಿ.ಒ.ಇ.ಡಿ. ವರ್ಗದ ಮತದಾರರಿಗೆ) ಅಂಚೆ ಮತಪತ್ರದ ಮೂಲಕ ಮತದಾನ ಸೌಲಭ್ಯ ಒದಗಿಸಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಜಿಲ್ಲಾ ಸೌಲಭ್ಯ ಕೇಂದ್ರವನ್ನು ತೆರೆಯಲಾಗಿದ್ದು, 1ನೇ ಮಹಡಿಯ ಕೊಠಡಿ ಸಂಖ್ಯೆ 109ರಲ್ಲಿ ಏ.20ರಿಂದ 22ರವರೆಗೆ ಬೆಳಗ್ಗೆ 10ರಿಂದ ಸಾಯಂಕಾಲ 5.30ರವರೆಗೆ ಸಹಾಯ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.

ಮನೆ ಮನೆ ಮತದಾನ ಪ್ರಕ್ರಿಯೆ ಕರ್ತವ್ಯದಲ್ಲಿ ತೆರಳಿದವರಿಗೆ ಆರೋಗ್ಯ ಇಲಾಖೆಯಿಂದ ಒಆರ್‌ಎಸ್ ಕೊಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಹಾಗು ಸ್ಥಳೀಯ ಸಂಸ್ಥೆಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಅವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಹಾಯಕ ಚುನಾವಣಾಽಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.

1109 ಮಂದಿ ಮತದಾನ-18 ಮಂದಿ ಮೃತ

ಪುತ್ತೂರು: ಏ.26ರಂದು ನಡೆಯಲಿರುವ ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಯಲ್ಲೇ ಮತದಾನ ಪ್ರಕ್ರಿಯೆ ಬಯಸಿ ಅರ್ಜಿ ಸಲ್ಲಿಸಿರುವ 85 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಮತು ವಿಶೇಷ ಚೇತನರಿಗೆ ಮನೆ ಮನೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಅಪೇಕ್ಷಿತ ಮತದಾರರ ಪೈಕಿ 1109 ಮಂದಿ ಮತ ಚಲಾಯಿಸಿದ್ದಾರೆ. 18 ಮಂದಿ ನಿಧನರಾಗಿದ್ದರು ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 787 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ 340 ಮಂದಿ ವಿಶೇಷ ಚೇತನರು ಸೇರಿದಂತೆ ಒಟ್ಟು 1127 ಮತದಾರರು ಮನೆಯಲ್ಲೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಏ.15ರಂದು ಮತದಾನ ಪ್ರಕ್ರಿಯೆ ಪ್ರಾರಂಭಗೊಂಡು ಏ.17ರಂದು ಮತದಾನ ಪ್ರಕ್ರಿಯೆ ಕೊನೆಗೊಂಡಿದೆ. ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಏಜೆಂಟರೊಂದಿಗೆ, ಚುನಾವಣಾ ಆಯೋಗದಿಂದ ನಿಯೋಜಿತ ಅಧಿಕಾರಿಗಳ ತಂಡ ಈ ಮತದಾರರ ಮನೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ನಡೆಸಿದೆ.
ತೆಂಕಿಲದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಡಿಮಸ್ಟರಿಂಗ್ ಮಾಡಲಾಗಿದೆ. ಚಲಾಯಿಸಲಾದ ಮತಗಳ ಪೆಟ್ಟಿಗೆಯನ್ನು ಪುತ್ತೂರು ತೆಂಕಿಲದ ಭದ್ರತಾ ಕೊಠಡಿಯಲ್ಲಿ ಇರಿಸಿಕೊಳ್ಳಲಾಗಿದ್ದು ಏ.18ರಂದು ಜಿಲ್ಲಾಽಕಾರಿಗಳ ಟ್ರೆಝರಿಗೆ ವರ್ಗಾವಣೆ ನಡೆಯಲಿದೆ. ಆ ಬಳಿಕ ಮತ ಎಣಿಕೆಯಂದು ತೆಗೆಯಲಾಗುವುದು ಎಂದವರು ತಿಳಿಸಿದ್ದಾರೆ.

ಸಮಸ್ಯೆಯಿದ್ದ ಮತಯಂತ್ರಗಳ ಬದಲಾವಣೆ: ಮತ ಯಂತ್ರಗಳ ಕಮಿಷನ್ ಪ್ರಕ್ರಿಯೆ ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಮ್ಮುಖದಲ್ಲಿ ನಡೆಸಲಾಗಿದೆ. ಈ ಸಂದರ್ಭ ಸಮಸ್ಯೆಯಿದ್ದ ಮತ ಯಂತ್ರಗಳ ಬದಲಿಗೆ ಹೊಸ ಮತ ಯಂತ್ರಗಳನ್ನು ಏ.17ರಂದು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ತರಿಸಲಾಗಿದೆ.ಅದರ ಕಮಿಷನ್ ಪ್ರಕ್ರಿಯೆಯೂ ಯಶಸ್ವಿಯಾಗಿ ನಡೆಯಿತು. 4 ವಿವಿಪ್ಯಾಟ್, 8 ಕಂಟ್ರೋಲ್ ಯುನಿಟ್ಸ್ ಸಮಸ್ಯೆಯಿದ್ದು, ಹೊಸದಾಗಿ 10 ಸಿಯು, 8 ವಿವಿಪ್ಯಾಟ್ ತರಿಸಿಕೊಳ್ಳಲಾಗಿದೆ.278 ಸಿಯು, 293 ವಿವಿಪ್ಯಾಟ್, 276 ಬಿಯು ಗಳು ಸದ್ಯ ಪುತ್ತೂರು ವಿಧಾಸಭಾ ಕ್ಷೇತ್ರದಲ್ಲಿದೆ ಎಂದು ಜುಬಿನ್ ಮೊಹಪಾತ್ರ ಹೇಳಿದರು.

LEAVE A REPLY

Please enter your comment!
Please enter your name here