ಕರಾಯ: ಶಾಲಾ ಆವರಣದಿಂದ ಕಳವಾಗಿದ್ದ ಮರಗಳು ಪತ್ತೆ

0

ಉಪ್ಪಿನಂಗಡಿ : ಶಾಲಾ ವಠಾರದಲ್ಲಿ ಕಾಣೆಯಾಗಿದ್ದ ಮರಮುಟ್ಟು ಪತ್ತೆ ಹಚ್ಚಿ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಡಿಪ್ಪೋಗೆ ಹಾಕಲ್ಪಟ್ಟ ಘಟನೆ ವರದಿಯಾಗಿದೆ.ವಾರದ ಹಿಂದೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಸರಕಾರಿ ಮಾದರಿ ಶಾಲೆ ಆವರಣದಿಂದ ಹತ್ತಕ್ಕೂ ಹೆಚ್ಚು ಮರಗಳು ಕಳವಾದ ಕುರಿತು ಖಚಿತ ವರ್ತಮಾನವು ಪುತ್ತೂರು ಸಹಾಯಕ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿತ್ತು.

ಅವರ ಸೂಚನೆಯಂತೆ ಉಪ್ಪಿನಂಗಡಿ ವಲಯ ಉಪ ಅರಣ್ಯಾಧಿಕಾರಿಯವರು ಶಾಲೆಗೆ ಭೇಟಿ ನೀಡಿ ಮಹಜರು ನಡೆಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ವಲಯಾಧಿಕಾರಿ ಕಚೇರಿಗೆ ಮಾಲಿಕರು ಬರುವಂತೆ ಸೂಚಿಸಿದ್ದರು.

ವಲಯಾಧಿಕಾರಿಗಳಾದ ಜಯಪ್ರಕಾಶ ಕೆ ಕೆ ಅವರು ತನಿಖೆ ನಡೆಸಿದ ವೇಳೆ ಆರಂಭದಲ್ಲಿ ಮರಗಳನ್ನು ಶಾಲಾ ಶಿಕ್ಷಕರೋರ್ವರಿಗೆ ಮನೆಗೆ ಒದಗಿಸಲಾಗಿದೆ ಎಂದು ಸಬೂಬು ಹೇಳಿ ಬಳಿಕ ಶಾಲಾ ವಾರ್ಷಿಕೋತ್ಸವಕ್ಕೆ ಉಪಯೋಗಿಸಲಾಗಿದೆ ಎಂದು ನುಣಿಚಿಕೊಳ್ಳಲು ಹೋಗಿ ಕೊನೆಗೆ ಇದೀಗ ಶಾಲಾ ಆವರಣದಲ್ಲೇ ಸಂಗ್ರಹಿಸಿ ಇಟ್ಟ ನೆಪ ಹೇಳಿ ವಶಪಡಿಸಿಕೊಳ್ಳಲಾಗಿ ಡಿಪ್ಪೋಗೆ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಗಿದೆ.

ವಿಶೇಷವೆಂದರೆ ಅರಣ್ಯ ಇಲಾಖೆಯಿಂದ 80 ಕ್ಕೂ ಮಿಕ್ಕಿ ಬೆಳೆದು ನಿಂತ ಮರಗಳ ತೆರವಿಗೆ ಸಂಖ್ಯೆ ಮುದ್ರಿಸಿದರೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳ ಪೈಕಿ ಹತ್ತಕ್ಕೂ ಮಿಕ್ಕಿ ಮರಗಳ ಕಳವು ನಡೆದ ಬಳಿಕ ಹೊಸ ತಿರುವು ಪಡೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ವಿಚಾರವಾಗಿದೆ..

LEAVE A REPLY

Please enter your comment!
Please enter your name here