ವಿಟ್ಲದ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ 100% ಫಲಿತಾಂಶ

0

ವಿಟ್ಲ: ವಿಟ್ಲದ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ 100% ಫಲಿತಾಂಶ ಲಭಿಸಿದೆ.
ಶಾಲಾ ವಿದ್ಯಾರ್ಥಿಗಳಾದ ವಿನಿಶಾ ರಿಯಾ ಪಾಯಸ್ 603 ಅಂಕ ಪಡೆದ ಶಾಲೆಗೆ ಪ್ರಥಮ, ಗೌತಮಿ ಗಿರೀಶ್ ಬಡೇಗರ್ ರವರು 602 ಅಂಕ ಪಡೆದು ಶಾಲೆಗೆ ದ್ವಿತೀಯ ಹಾಗೂ ಸಾನ್ವಿರವರು 601 ಅಂಕವನ್ನು ಪಡೆದು ಶಾಲೆಗೆ ತೃತೀಯ ಸ್ಥಾನಿಯಾಗಿದ್ದಾರೆ. ಶಾಲೆಯಿಂದ ಒಟ್ಟು 62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 37 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಹಾಗೂ 5 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here