ಪುತ್ತೂರು: ಮರೀಲ್ ಕಾಡಮನೆ ನಿವಾಸಿ ಆಟೋ ರಿಕ್ಷಾ ಚಾಲಕರೊಬ್ಬರ ಪತ್ನಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.28ರಂದು ಬೆಳಕಿಗೆ ಬಂದಿದೆ.
ಆಟೋ ರಿಕ್ಷಾ ಚಾಲಕ ಮನೋಜ್ ಎಂಬವರ ಪತ್ನಿ ಸಂಧ್ಯಾ(45ವ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಮನೋಜ್ ಅವರು ರಾತ್ರಿ ವೇಳೆ ರಿಕ್ಷಾದಲ್ಲಿ ಬಾಡಿಗೆ ಮಾಡುತ್ತಿದ್ದು ಬೆಳಗ್ಗೆ ಮನೆಗೆ ತೆರಳುತ್ತಿದ್ದರು. ಮನೆಯಲ್ಲಿ ಪತ್ನಿ ಮತ್ತು ಪುತ್ರ ಮಾತ್ರ ಇರುತ್ತಿದ್ದರು. ಮೇ .27ರಂದು ರಾತ್ರಿ ಮನೆಯಿಂದ ತೆರಳಿದ್ದ ಮನೋಜ್ ಅವರು ಮೇ.28ರಂದು ಬೆಳಿಗ್ಗೆ ಮನೆಗೆ ಹೋದಾಗ ಪತ್ನಿ ಮನೆಯ ಹಾಲ್ನ ಕಿಟಕಿಗೆ ನೇಣು ಬಿಗಿದು ಅಸ್ವಸ್ಥ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಸಂಧ್ಯಾ ಅವರು ಮೃತಪಟ್ಟಿದ್ದರು. ಮೃತರು ಪತಿ ಮನೋಜ್, 13 ವರ್ಷ ಪ್ರಾಯದ ಪುತ್ರನನ್ನು ಅಗಲಿದ್ದಾರೆ.