ಅಜ್ಜಿಕಲ್ಲು ಅಂಗನವಾಡಿ ಕೇಂದ್ರದ ಮಕ್ಕಳ ಬೀಳ್ಕೊಡುಗೆ- ಮಕ್ಕಳಿಂದ ಮಿಕ್ಸರ್ ಗ್ರೈಂಡರ್ ಕೊಡುಗೆ

0

ನಿಡ್ಪಳ್ಳಿ; ಅಜ್ಜಿಕಲ್ಲು ಮುಂಡೋದಮೂಲೆ ನಂದಗೋಕುಲ ಅಂಗನವಾಡಿ ಕೇಂದ್ರದಿಂದ 1ನೇ ತರಗತಿಗೆ ಸೇರುವ ಪುಟಾಣಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮೆ.29 ರಂದು ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ  ಹರಿಣಾಕ್ಷಿ ಶರತ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

 ಏಕತಡ್ಕ ಶಾಲಾ ಮುಖ್ಯ ಶಿಕ್ಷಕಿ  ಚಿತ್ರ ವಿ ರೈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಬಾಲವಿಕಾಸ ಸಮಿತಿ ಸದಸ್ಯರಾದ  ಹರಿಪ್ರಸಾದ್ ರೈ ಮೊಡಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

     1ನೇ ತರಗತಿಗೆ ಪ್ರವೇಶ ಪಡೆಯುವ 11 ಮಕ್ಕಳಾದ ರಿತ್ವಿನ್ ರೈ, ಶನ್ಮಿತ್, ಸಾತ್ವಿಕ, ನಿಶ್ವಿ, ಪೂರ್ವಿಕ, ಕೀರ್ತಿ, ಜಾನ್ವಿ, ಲಾಸ್ಯ, ಅಪ್ನ, ದೀಪ್ತ, ಸುಶ್ಮಿತಾ ಇವರು ಕೇಂದ್ರಕ್ಕೆ ಮಿಕ್ಸರ್ ಗ್ರೆಂಡರ್ ಕೊಡುಗೆಯಾಗಿ ನೀಡಿದರು. 

     ಕೇಂದ್ರದ ಪುಟಾಣಿಗಳು ಪ್ರಾರ್ಥಿಸಿ, ಕೇಂದ್ರದ ಕಾರ್ಯಕರ್ತೆ  ಗೀತಾ ಡಿ  ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಚಂದ್ರಿಕಾ ವಂದಿಸಿದರು.  ಕೇಂದ್ರದ ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರದ ಸಹಾಯಕಿ ರತಿ ಸಹಕರಿಸಿದರು.

LEAVE A REPLY

Please enter your comment!
Please enter your name here