ಜಿದ್ದಾಜಿದ್ದಿನ ಕಣದಲ್ಲಿ ಭರ್ಜರಿ ಜಯಭೇರಿ ಭಾರಿಸಿದ ಬಿಜೆಪಿಯ ಡಾ.ಧನಂಜಯ ಸರ್ಜಿ – ಮಕ್ಕಳ ತಜ್ಞರಿಗೆ ಭರ್ಜರಿ ಜೈಕಾರ ಹಾಕಿದ ನೈರುತ್ಯ ಪದವೀಧರರು

0

ಮೈಸೂರು: ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಭರ್ಜರಿ ಬಹುಮತದಿಂದ ಗೆಲುವು ಕಂಡಿದ್ದಾರೆ.

ರೋಚಕ ಕದನದಲ್ಲಿ ಬಿಜೆಪಿಯ ಧನಂಜಯ ಸರ್ಜಿ, ಕಾಂಗ್ರೆಸ್‍ನ ಆಯನೂರು ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ರಘುಪತಿ ಭಟ್ ಕಣದಲ್ಲಿ ಇದ್ದರು.

ದಾವಣಗೆರೆಯ ಹೊನ್ನಳ್ಳಿಯಿಂದ ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಡಿಕೇರಿ, ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶಿವಮೊಗ್ಗದ ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರು 37627 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದರು.
ಕಾಂಗ್ರೆಸ್‍ ನ ಆಯನೂರು ಮಂಜುನಾಥ್ 13516 , ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ 7039, ಎಸ್ ಪಿ ದಿನೇಶ್ 2518 ಮತಗಳನ್ನು ಪಡೆದರು.

ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮತಎಣಿಕೆ ನಡೆದಿದ್ದು, ಮಧ್ಯರಾತ್ರಿ 12 ಗಂಟೆಗೆ ಪದವೀಧರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ.

ಒಟ್ಟು 66497 ಮತಗಳು ಚಲಾವಣೆಯಾಗಿದ್ದು ಅದರಲ್ಲಿ 61382 ಮತಗಳು ಅಂಗೀಕೃತವಾಗಿತ್ತು. ಮಿಕ್ಕ ಮತಗಳು ತಿರಸ್ಕತವಾಗಿದ್ದವು.

ಭರ್ಜರಿ ಗೆಲುವು ಕಂಡ ಡಾ.ಧನಂಜಯ ಸರ್ಜಿಯವರನ್ನು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಮುಖಂಡರು ಸಹಿತ ಕಾರ್ಯಕರ್ತರು ಮೈಸೂರಿನ ಮತಎಣಿಕೆ ಕೇಂದ್ರದಲ್ಲಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here