ದೋಳ್ಪಾಡಿ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

0

ಕಾಣಿಯೂರು: ದೋಳ್ಪಾಡಿ ಸರಕಾರಿ ಪ್ರಾಥಮಿಕ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆಯ ಮೂಲಕ ನಡೆಸಲಾಯಿತು. ಶಾಲಾ ನಾಯಕನಾಗಿ 7ನೇ ತರಗತಿಯ ಆಯುಷ್.ಕೆ , ಉಪನಾಯಕನಾಗಿ ಭವಿತ್ ಎಸ್ ಆಯ್ಕೆಯಾಗಿದ್ದಾರೆ.

ಶಿಕ್ಷಣ ಮಂತ್ರಿಯಾಗಿ ಅಶ್ವಿನ್.ಕೆ, ಲಕ್ಷ್ಯ.ಕೆ. ಪಿ , ಆರೋಗ್ಯ ಮಂತ್ರಿಯಾಗಿ ನಿಕ್ಷೇಪ್, ಪೌಶಿ, ಸಾಂಸ್ಕೃತಿಕ ಮಂತ್ರಿಯಾಗಿ ಪಾರ್ಥ. ವಿ. ರೈ, ಸಾನ್ವಿ, ಕ್ರೀಡಾ ಮಂತ್ರಿಯಾಗಿ ಜಾಹ್ನವಿ, ಕೃತಿಕ್, ರಕ್ಷಣಾ ಮಂತ್ರಿಯಾಗಿ ಉಪೇಕ್ಷಾ, ದಿಶಾ, ನೀರಾವರಿ ಮಂತ್ರಿಯಾಗಿ ಶೋಭಿತ್, ಅಕ್ಷತಾ, ಗೃಹ ಮಂತ್ರಿಯಾಗಿ ವರ್ಷಿತ್, ಚರಣ್, ಸ್ವಚ್ಛತಾ ಮತ್ತು ಆರೋಗ್ಯ ಮಂತ್ರಿಯಾಗಿ ಕೀರ್ತಿಕಾ, ಜನನಿ, ಗ್ರಂಥಾಲಯ ಮಂತ್ರಿಯಾಗಿ ತೃಷಾ, ಗ್ರೀಷ್ಮಾ.ಎಚ್.ಪಿ , ತೋಟಗಾರಿಕೆ ಮಂತ್ರಿಯಾಗಿ ಕಾರ್ತಿಕ್, ದೀಕ್ಷಿತ್, ವಿರೋಧ ಪಕ್ಷದ ನಾಯಕಿ ನಾಯಕರಾಗಿ ಸಾನಿಧ್ಯ, ಧವನ್ ಆಯ್ಕೆಯಾದರು. ಸಹಶಿಕ್ಷಕಿ ಚಂಚಲಾಕ್ಷಿ ಇವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ಶಿಕ್ಷಕರಾದ ದೀಪಿಕಾ ನಾರಾಯಣ ನಾಯ್ಕ, ಜಯರಾಜ್ ಡಿ. ಎಸ್, ಕಲಾವತಿ, ಸೌಮ್ಯ, ಕೃತಿ ಇವರು ಮತಗಟ್ಟೆ ಅಧಕಾರಿಗಳಾಗಿ ಸಹಕರಿಸಿದರು. ಮುಖ್ಯ ಶಿಕ್ಷಕರಾದ ಜಯಣ್ಣ .ಎಸ್ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಭೋದಿಸಿದರು.

LEAVE A REPLY

Please enter your comment!
Please enter your name here