ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಡೆಸಲ್ಪಡುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ಪೆರಿಯಡ್ಕ, ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ರೋಟರಿ ಕ್ಲಬ್ ಬಂಟ್ವಾಳ ಮತ್ತು ಉಪ್ಪಿನಂಗಡಿ, ಅಶ್ವಿನಿ ಆಪ್ಟಿಕಲ್ಸ್ ಕಡಬ ಇವರ ಸಹಭಾಗಿತ್ವದಲ್ಲಿ ಜೂ.23ರಂದು ನಡೆಯಿತು.
ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಗೌಡ ಬಿ.ಟಿ. ಉದ್ಘಾಟಿಸಿ ಮಾತನಾಡಿ, ಕಣ್ಣಿನ ಸುರಕ್ಷತೆ ಮಹತ್ವವಾಗಿದೆ. ಕಣ್ಣಿನ ಸಮಸ್ಯೆಗಳಿಗೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಎಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಅವರು ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಈ ಸೌಲಭ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಡೆಂಗ್ಯೂ, ಮಲೇರಿಯಾ ಜ್ವರದ ಬಗ್ಗೆ ಮಾಹಿತಿ ನೀಡಿದರು. ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧ ಶೆಟ್ಟಿಯವರು ಮಾತನಾಡಿ, ಗ್ರಾಮೀಣ ಜನತೆಗೆ ಹೊಸ ಸಂಚಲನ ಮೂಡಿಸುವ ಉದ್ದೇಶದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಘ, ಕಿರಿಯ ವೈದ್ಯಾಧಿಕಾರಿ ಹಾಗೂ ನೇತ್ರಾಧಿಕಾರಿ ಶಾಂತರಾಜು, ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಣಾಧಿಕಾರಿ ಗಾಯತ್ರಿ, ಉಪ್ಪಿನಂಗಡಿ ರೋಟರಿ ಕಾರ್ಯದರ್ಶಿ ಕೇಶವ ಪಿ.ಎಮ್., ಸದಸ್ಯರಾದ ಲೋಕೇಶ್ ನೆಕ್ಕರೆ, ಉದ್ಯಮಿಗಳಾದ ಜಗದೀಶ್ ನಾಯಕ್, ಪ್ರತಾಪ್ ಪೆರಿಯಡ್ಕ, ಎಸ್‌ಡಿಎಂಸಿ ಅಧ್ಯಕ್ಷ ಶೀನಪ್ಪ ಗೌಡ, ಸದಸ್ಯರಾದ ರಾಮಚಂದ್ರ ಗೌಡ, ಶೇಷಪ್ಪ ಗೌಡ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲಕ್ಷ್ಮಿ ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹ ಶಿಕ್ಷಕಿ ಭವ್ಯ ವೈ ವಂದಿಸಿದರು. ರಜನಿ ಹೆಚ್ ಕಾರ್ಯಕ್ರಮ ನಿರೂಪಿಸಿದರು.