ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

0

ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣಗೊಂಡ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನಡೆಯಿತು.

ಬೆಥನಿ ಸನ್ಯಾಸ ಸಮೂಹಕದ ಪ್ರೊವಿನ್ಶಿಯಲ್ ಸುಪಿರೀಯರ್ ಆಗಿರುವ ರೆ.ಫಾ.ಜಾರ್ಜ್ ಜೋಸೆಫ್ ಐಯನತ್ತ್‌ರವರು ಉದ್ಘಾಟಿಸಿದರು. ಸಂಸ್ಥೆಯ ಸಂಚಾಲಕರಾದ ರೆ.ಫಾ.ಜೈಸನ್ ಸೈಮನ್ ಒಐಸಿ, ಪ್ರಾಂಶುಪಾಲರಾದ ರೆ.ಫಾ. ವರ್ಗೀಸ್ ಕೈಪನಡ್ಕ, ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ., ಶಿಕ್ಷಕವೃಂದ ಹಾಗೂ ಪೋಷಕರು ಭಾಗವಹಿಸಿದ್ದರು. ನೂತನ ಕಂಪ್ಯೂಟರ್ ಲ್ಯಾಬ್‌ನಲ್ಲಿ ೪೦ ಕಂಪ್ಯೂಟರ್‌ಗಳಿದ್ದು ವಿದ್ಯಾರ್ಥಿಗಳಿಗೆ ದೃಕ್ ಶ್ರಾವ್ಯ ಮಾದರಿಯಲ್ಲಿ ತರಗತಿ ನಡೆಸುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here