ಆದರ್ಶ ದಂಪತಿ ಸ್ಪರ್ಧೆ
ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ ಘಟಕ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಜು.6 ಮತ್ತು 7ರಂದು ಎರಡು ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಹಲಸು ಹಬ್ಬ ನಡೆಯಲಿದೆ ಎಂದು ಜೇಸಿಐ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಬಿ. ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜು.6ರಂದು ಬೆಳಗ್ಗೆ 8ಕ್ಕೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ ಮಳಿಗೆಗಳಿಗೆ ಚಾಲನೆ ನೀಡಲಿದ್ದು, ಅತಿಥಿಗಳಾಗಿ ಉಪ್ಪಿನಂಗಡಿ ಜೇಸಿಐಯ ಪೂರ್ವಾಧ್ಯಕ್ಷ ಡಾ. ಎಂ.ಆರ್. ಶೆಣೈ ಭಾಗವಹಿಸಲಿದ್ದು, ಗೆಳೆಯರು 94 ಉಪ್ಪಿನಂಗಡಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಹಾಗೂ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಗೌರವ ಉಪಸ್ಥಿತಿ ಇರಲಿದ್ದಾರೆ. ಬೆಳಗ್ಗೆ 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಉಪ್ಪಿನಂಗಡಿ ಇದರ ಅಧ್ಯಕ್ಷ ಕೆ.ವಿ. ಪ್ರಸಾದ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ. ಜೆ. ರಮೇಶ್, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ಭಾಗವಹಿಸಲಿದ್ದಾರೆ.
ಜೇಸಿಐ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಬಿ. ಅಧ್ಯಕ್ಷತೆ ವಹಿಸಲಿದ್ದು, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರಾಗ್ಸ್, ಪುತ್ತೂರು ವಲಯ ಪೋಟೋಗ್ರಾಫರ್ ಅಸೋಸಿಯೇಶನ್‌ನ ಅಧ್ಯಕ್ಷ ರಘು ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಪ್ಪಿನಂಗಡಿ ವಲಯದ ಮೇಲ್ವೀಚಾರಕ ಶಿವಪ್ಪ ಎಂ.ಕೆ., ನವೋದಯ ಚಾರಿಟೇಬಲ್ ಟ್ರಸ್ಟ್‌ನ ಪುತ್ತೂರು ತಾಲೂಕು ಮೇಲ್ವೀಚಾರಕ ಚಂದ್ರಶೇಖರ ಆಚಾರ್ಯ ಬಿ.ಕೆ., ಒಡಿಯೂರು ಗ್ರಾಮ ವಿಕಾಸ ಯೋಜನೆ ಉಪ್ಪಿನಂಗಡಿ ವಲಯದ ಸಂಯೋಜಕಿ ಶ್ರೀಮತಿ ಸುಮಿತ್ರ, ಗೋಳಿತ್ತೊಟ್ಟು ವಲಯ ಸಂಯೋಜಕಿ ಶ್ರೀಮತಿ ಭಾರತಿ ಗೌರವ ಉಪಸ್ಥಿತಿ ಇರಲಿದ್ದಾರೆ. ಈ ಸಂದರ್ಭ ಪದ್ಮ ಶೆಟ್ಟಿ ಅಡೆಕ್ಕಲ್, ನೇಮಣ್ಣ ಪೂಜಾರಿ ಪಾಲೇರಿ, ಸಿದ್ದಪ್ಪ ನಾಯ್ಕ್, ಧರ್ನಪ್ಪ ಗೌಡ ಅಂಡಿಲ, ಕೆ.ಪಿ. ಜಯರಾಮ ಶೆಟ್ಟಿ, ಪ್ರತಾಪ್ ಪೆರಿಯಡ್ಕ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಮಧ್ಯಾಹ್ನ 12ಕ್ಕೆ ಕೃಷಿ ಮಾಹಿತಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮವನ್ನು ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ಡಾ. ನಿರಂಜನ್ ರೈ ಉದ್ಘಾಟಿಸಲಿದ್ದು, ಸಂಪೂನ್ಮೂಲ ವ್ಯಕ್ತಿಗಳಾದ ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ಎ. ಸುರೇಶ್ ರೈ ಅವರು ‘ಸಮಗ್ರ ಸುಸ್ಥಿರ ಕೃಷಿ ಪದ್ಧತಿ’ ಬಗ್ಗೆ ಹಾಗೂ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕಾಂತರಾಜ್ ವೈ ಅವರು ‘ಹಲಸಿನ ಹಣ್ಣಿನ ಮೌಲ್ಯವರ್ಧನೆ’ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾದ ಉಪ್ಪಿನಂಗಡಿ ಶಾಖೆಯ ವ್ಯವಸ್ಥಾಪಕ ವಿಶುತ್ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯ ಅಬ್ದುಲ್ ರಹಿಮಾನ್ ಯುನಿಕ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಆದರ್ಶ ದಂಪತಿ ಸ್ಪರ್ಧೆ:
ಸಂಜೆ 5ರಿಂದ ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅವರ ಸಾರಥ್ಯದಲ್ಲಿ ಆದರ್ಶ ದಂಪತಿ ಸ್ಪರ್ಧೆ ನಡೆಯಲಿದ್ದು, ಉದ್ಯಮಿ ನಟೇಶ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ರಂಗ ಕಲಾವಿದ ರಂಗ್‌ದ ರಾಜೆ ಸುಂದರ ರೈ ಮಂದಾರ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಶಿವಕುಮಾರ್ ಬಾರಿತ್ತಾಯ ಬೆಳಾಲು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜು.7ರಂದು ಬೆಳಗ್ಗೆ 10ರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕೃಷಿ ಮಾಹಿತಿ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿ ನಿತ್ಯ ಫುಡ್ ಪ್ರೊಡಕ್ಟ್‌ನ ಮಾಲಕ ರಾಧಾಕೃಷ್ಣ ಇಟ್ಟಿಗುಂಡಿ ‘ನಮ್ಮ ಆಹಾರ ಬಳಕೆಯಲ್ಲಿ ಸಿರಿ ಧಾನ್ಯದ ಮಹತ್ವ’ ವಿಷಯದ ಬಗ್ಗೆ ಮಾತನಾಡಲಿದ್ದು, ಅತಿಥಿಗಳಾಗಿ ವಿದ್ಯಾಧರ ಜೈನ್ ಪದ್ಮವಿದ್ಯಾ, ಜೇಸಿಐ ತರಬೇತಿ ವಿಭಾಗ 15ರ ವಲಯ ನಿರ್ದೇಶಕಿ ಹೇಮಲತಾ ಪ್ರದೀಪ್, ವಲಯ 15 ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಭರತ್ ಶೆಟ್ಟಿ ಭಾಗವಹಿಸಲಿದ್ದು, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪುಳಿತ್ತಡಿ ಮಯೂರ ಮಿತ್ರವೃಂದದ ಅಧ್ಯಕ್ಷ ಹರೀಶ್ ಕೊಡಂಗೆ, ಕಾಂಚನ ವಿಕ್ರಂ ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರ ಕಾಂಚನ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಪ್ರಶಾಂತ್ ಕುಮಾರ್ ರೈ ತಿಳಿಸಿದರು.
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ತಾ.ಪಂ. ಮಾಜಿ ಸದಸ್ಯರಾದ ಎನ್. ಉಮೇಶ್ ಶೆಣೈ, ಮುಕುಂದ ಬಜತ್ತೂರು, ನೆಲ್ಯಾಡಿಯ ಕಾಮಧೇನು ಮಹಿಳಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್, ಜೇಸಿಐ ಭಾರತದ ಜೆಎಸಿ ವಲಯ 15ರ ಚೇರ್‌ಮೆನ್ ಲೋಕೇಶ್ ರೈ, ದಂತ ವಿನ್ಯಾಸ ವೈದ್ಯ ಡಾ. ಅಶಿತ್ ಎಂ.ವಿ., ಜೇಸಿಐ ವಲಯ 15ರ ಉಪಾಧ್ಯಕ್ಷ ಶಂಕರ ರಾವ್ ಭಾಗವಹಿಸಲಿದ್ದು, ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಲವೀನಾ ಪಿಂಟೋ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಎರಡನೇ ಬಾರಿಗೆ ಹಲಸು ಹಬ್ಬ ನಡೆಯುತ್ತಿದ್ದು, ಇದರಲ್ಲಿ ಹಲಸಿನ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡುವ ಮಳಿಗೆಗಳು, ಹಲಸಿನ ಉತ್ಪನ್ನಗಳ ಮಾರಾಟ ಮಳಿಗೆಗಳು, ವಿವಿಧ ತಳಿಯ ಹಲಸು ಸೇರಿದಂತೆ ಇತರ ಹಣ್ಣುಗಳು, ನರ್ಸರಿಗಳು ಇರಲಿದೆ ಎಂದು ಪ್ರಶಾಂತ್ ಕುಮಾರ್ ರೈ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಶ್ರೀಮತಿ ಲವೀನಾ ಪಿಂಟೋ, ಜೇಸಿ ಕೆ.ಪಿ. ಕುಲಾಲ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ, ಸಿಬ್ಬಂದಿ ಪ್ರವೀಣ್ ಆಳ್ವ ಉಪಸ್ಥಿತರಿದ್ದರು.