ಪುತ್ತೂರಿನಲ್ಲಿ ಧರ್ಮದೈವ ತುಳು ನಿನೆಮಾ ಪ್ರೀಮಿಯರ್ ಶೋ ಹೌಸ್ ಫುಲ್ – ಟಿಕೆಟ್ ಸಿಗದೆ ವಾಪಸ್ ಆದ 200ಕ್ಕೂ ಅಧಿಕ ಸಿನಿ ಪ್ರೇಮಿಗಳು

0

ಪುತ್ತೂರು: ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಧರ್ಮದೈವ ತುಳು ನಿನೆಮಾದ ಪ್ರೀಮಿಯರ್ ಶೋ ನಿನ್ನೆ ಪುತ್ತೂರಿನ ಜಿಎಲ್ ಒನ್ ಮಾಲ್‌ನಲ್ಲಿ ನಡೆದಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಂಜೆ 7ಗಂಟೆಗೆ ಪ್ರೀಮಿಯರ್ ಶೋ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು, ಗಣ್ಯರಾದ ಜಗನ್ನಾಥ ರೈ ನುಳಿಯಾಲು, ದಂಬೆಕಾನ ಸದಾಶಿವ ರೈ, ಜಯಂತ್ ನಡುಬೈಲು, ರವೀಂದ್ರ ಶೆಟ್ಟಿ ನುಳಿಯಾಲು, ಆರ್ ಸಿ ನಾರಾಯಣ್, ಪುರಂದರ ರೈ ಮಿತ್ರಂಪಾಡಿ, ಜಯಪ್ರಕಾಶ್ ರೈ, ಸುಂದರ್ ರೈ ಮಂದಾರ, ಅರುಣ್ ಕುಮಾರ್ ಪುತ್ತಿಲ, ಗೋಕುಲ್‌ನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಬಹು ಕುತೂಹಲವನ್ನು ಸೃಷ್ಟಿಸಿದ್ದ ಧರ್ಮದೈವ ಸಿನೆಮಾದ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿತ್ತು. ತುಳು ಸಿನೆಮಾ ಇತಿಹಾಸದಲ್ಲೆ ಧರ್ಮದೈವ ಚಿತ್ರ ದಾಖಲೆ ನಿರ್ಮಿಸಿದ್ದು ಹಲವು ಪ್ರೇಕ್ಷಕರು ಥಿಯೇಟರ್‌ನಲ್ಲಿ ಸೀಟ್ ಸಿಗದ ಹಿನ್ನಲೆಯಲ್ಲಿ ನಿಂತುಕೊಂಡು ಸಿನೆಮಾ ವೀಕ್ಷಿಸಿದರು. ಹೌಸ್ ಫುಲ್ ಆದ ಹಿನ್ನಲೆಯಲ್ಲಿ 200ಕ್ಕೂ ಅಧಿಕ ಸಿನಿ ಪ್ರೇಮಿಗಳಿಗೆ ಸಿನೆಮಾ ವೀಕ್ಷಿಸಲು ಅವಕಾಶ ಸಿಗದೆ ವಾಪಾಸ್ ತೆರಳಿದ್ದಾರೆ. ಇನ್ನು ಸಿನೆಮಾ ವೀಕ್ಷಿಸಿದ ಪೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ನಾಳೆ ಕರಾವಳಿಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಧರ್ಮದೈವ ಸಿನೆಮಾ ಬಿಡುಗಡೆಯಾಗಲಿದೆ. ಸಿನೆಮಾವು ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್‌ನ ಸಿನಿಗ್ಯಾಲಕ್ಸಿ, ನಟರಾಜ್, ಪಡು ಬಿದ್ರಿಯ ಭಾರತ್ ಸಿನೆಮಾಸ್, ಉಡುಪಿಯ ಕಲ್ಪನಾ, ಭಾರತ್ ಸಿನೆಮಾಸ್, ಮಣಿಪಾಲದ ಐನಾಕ್ಸ್, ಭಾರತ್ ಸಿನೆಮಾಸ್, ಕಾರ್ಕಳದ ಪ್ಲಾನೆಟ್, ರಾಧಿಕಾ, ಪುತ್ತೂರಿನ ಭಾರತ್ ಸಿನೆಮಾಸ್, ಬೆಳ್ತಂಗಡಿಯ ಭಾರತ್ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.
ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಕಥೆ- ಸಂಭಾಷಣೆಯನ್ನು ಹಮೀದ್ ಪುತ್ತೂರು ಬರೆದಿದ್ದು, ಅರುಣ್ ರೈ ಪುತ್ತೂರು ಅವರು ಛಾಯಾಗ್ರಹಣವನ್ನು ಮಾಡಿದ್ದಾರೆ. ಭಾಗವತ ಪಟ್ಲ ಸತೀಶ್ ಶೆಟ್ಟಿ ಸಮನ್ವಿ ರೈ ನುಳಿಯಾಲು ಅವರ ಹಿನ್ನೆಲೆಯ ಗಾಯನವಿದೆ.
ʼಧರ್ಮದೈವ’ ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ರೂಪಶ್ರೀ ವರ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ, ಭರತ್ ಶೆಟ್ಟಿ, ರವಿ ಸಾಲ್ಯಾನ್, ಸಂದೀಪ್ ಪೂಜಾರಿ, ಪುಷ್ಪರಾಜ್ ಬೆಳ್ಳಾರೆ, ರಂಜನ್ ಬೋಳಾರ್, ಕೌಶಿಕ್ ರೈ ಕುಂಜಾಡಿ, ದೀಕ್ಷಾ ಡಿ.ರೈ ಹಾಗೂ ಗ್ರೇಷಿಯಲ್ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here