ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ ವಿಚಾರ-ಜಿಲ್ಲಾಧ್ಯಕ್ಷರಿಂದ ಅಭಿಪ್ರಾಯ ಸಂಗ್ರಹ-ರಾಜ್ಯಾಧ್ಯಕ್ಷರಿಗೆ ರವಾನೆ

0

ಪುತ್ತೂರು: ಬಿಜೆಪಿ ಪುತ್ತೂರು ಮಂಡಲದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಯ್ಕೆಗೆ ಸಂಬಂಧಿಸಿ ಜು.17ರಂದು ಮಂಗಳೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ಅಪೇಕ್ಷಿತರ ಸಮಾಲೋಚನಾ ಸಭೆ ನಡೆಯಿತು.


ಸಭೆಯಲ್ಲಿ ಅಪೇಕ್ಷಿತ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಸೂಚಿತರ ಪಟ್ಟಿಯನ್ನು ಸಂಗ್ರಹಿಸಲಾಯಿತು. ಈ ಪಟ್ಟಿಯನ್ನು ರಾಜ್ಯಾಧ್ಯಕ್ಷರಿಗೆ ಕಳುಹಿಸಿ ಅವರಿಂದಲೇ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಹೆಸರು ಘೋಷಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮನಾಥ, ಕಿಶೋರ್ ಬೊಟ್ಯಾಡಿ, ಉದಯ ಕುಮಾರ್, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಗೋಪಾಲಕೃಷ್ಣ ಹೇರಳೆ, ಪುತ್ತೂರು ಪ್ರಭಾರಿ ಸುನಿಲ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾಪ್ರಸಾದ್, ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಎಸ್.ಅಪ್ಪಯ್ಯ ಮಣಿಯಾಣಿ, ಭಾಮಿ ಅಶೋಕ್ ಶೆಣೈ, ಚನಿಲ ತಿಮ್ಮಪ್ಪ ಶೆಟ್ಟಿ, ರಾಜೇಶ್ ಬನ್ನೂರು, ವಿರೂಪಾಕ್ಷ ಭಟ್, ಬೂಡಿಯರ್ ರಾಧಾಕೃಷ್ಣ ರೈ, ಜಯಂತಿ ನಾಯಕ್, ಪ್ರೇಮಲತಾ ರಾವ್, ರಾಧಾಕೃಷ್ಣ ನಂದಿಲ, ಶಂಭು ಭಟ್, ಮೀನಾಕ್ಷಿ ಮಂಜುನಾಥ್, ರಮಣಿ ಗಾಣಿಗ, ದೀಕ್ಷಾ ಪೈ, ಚಿತ್ರಾ ರೈ, ಉಷಾ ಮುಳಿಯ, ಕೃಷ್ಣಪ್ರಸಾದ್ ಶೆಟ್ಟಿ, ಲಕ್ಷ್ಮಣ ಬೆಳ್ಳಿಪ್ಪಾಡಿ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಮಂಡಲದ ಪದಾಧಿಕಾರಿಗಳು, ಬಿಜೆಪಿ ಚುನಾವಣಾ ನಿರ್ವಾಹಣಾ ಸಮಿತಿ, ಪಕ್ಷದ ವಿವಿಧ ಘಟಕಗಳ ಪ್ರಮುಖರು, ಬಿಜೆಪಿಯೊಂದಿಗೆ ವಿಲೀನಗೊಂಡ ಪುತ್ತಿಲ ಪರಿವಾರದ ಪ್ರಮುಖರಾದ ಪ್ರಸನ್ನ ಕುಮಾರ್ ಮಾರ್ತ, ಅರುಣ್ ಕುಮಾರ್ ಪುತ್ತಿಲ ಸಹಿತ ಸುಮಾರು 120 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಗಂಟೆ 3.30ಕ್ಕೆ ಆರಂಭಗೊಂಡ ಸಭೆಯು ಸಂಜೆ ಗಂಟೆ 5.15ಕ್ಕೆ ಮುಕ್ತಾಯಗೊಂಡಿತ್ತು.


ಅಧ್ಯಕ್ಷ/ಕಾರ್ಯದರ್ಶಿಗಳನ್ನು ಹೀಗೆ ಸೂಚಿಸಲಾಯಿತು:
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಂಡಲದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ತಮ್ಮ ತಮ್ಮ ಆಯ್ಕೆಗಳನ್ನು ಸೂಚಿಸುವಂತೆ ತಿಳಿಸಿದಾಗ ಸಭೆಯಲ್ಲಿದ್ದ ಅಪೇಕ್ಷಿತರು ಹಲವು ಮಂದಿಯ ಹೆಸರು ಸೂಚಿಸಿದರು. ಗ್ರಾಮಾಂತರ ಮಂಡಲಕ್ಕೆ ಒಟ್ಟು 21 ಮಂದಿಯನ್ನು ಮತ್ತು ನಗರ ಮಂಡಲಕ್ಕೆ 12 ಮಂದಿಯನ್ನು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.


ಗ್ರಾಮಾಂತರ ಮಂಡಲಕ್ಕೆ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ರಾಜೀವ ಭಂಡಾರಿ, ಪ್ರಸನ್ನ ಕುಮಾರ್ ಮಾರ್ತ, ದಯಾನಂದ ಶೆಟ್ಟಿ ಉಜಿರ್‌ಮಾರ್, ಉಮೇಶ್ ಕೋಡಿಬೈಲು, ಪುರುಷೋತ್ತಮ ಮುಂಗ್ಲಿಮನೆ, ಸಹಜ್ ರೈ ಬಳಜ್ಜ, ಅರುಣ್ ವಿಟ್ಲ, ಹರಿಪ್ರಸಾದ್ ಯಾದವ್, ನಿತೀಶ್ ಕುಮಾರ್ ಶಾಂತಿವನ, ರಾಜೇಶ್ ಬೇಕಲ್, ಹರೀಶ್ ಪೂಜಾರಿ ಮರುವಾಳ, ಮುರಳಿಕೃಷ್ಣ ಹಸಂತಡ್ಕ, ರತನ್ ರೈ, ಯತೀಂದ್ರ ಕೊಚ್ಚಿ, ಪುನೀತ್ ಮಾಡತ್ತಾರ್, ಸುನಿಲ್ ದಡ್ಡು, ನಾಗೇಶ್ ಕೆಮ್ಮಾಯಿ, ಪ್ರಶಾಂತ್ ನೆಕ್ಕಿಲಾಡಿ, ರವಿ ರೈ ಮಠ, ಸುರೇಶ್ ಅತ್ರಮಜಲ್, ಪ್ರವೀಣ್ ಶೆಟ್ಟಿ ತಿಂಗಳಾಡಿಯವರ ಹೆಸರನ್ನು ಸೂಚಿಸಲಾಯಿತು. ನಗರ ಮಂಡಲಕ್ಕೆ ಶಿವಕುಮಾರ್, ಸಚಿನ್ ಶೆಣೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಅನಿಲ್ ತೆಂಕಿಲ, ಅನ್ನಪೂರ್ಣೇಶ್ವರಿ, ವಿಶ್ವನಾಥ ಗೌಡ ಬನ್ನೂರು, ಅನಿಲ್ ತೆಂಕಿಲ, ವಸಂತಲಕ್ಷ್ಮೀ, ಗೌರಿ ಬನ್ನೂರು, ಸಂತೋಷ್ ಕೈಕಾರ, ಯುವರಾಜ್ ಪೆರಿಯತ್ತೋಡಿ, ದಯಾರಾಜ್ ತೆಂಕಿಲ, ಸ್ವಯಂಪ್ರಭ ಅವರ ಹೆಸರನ್ನು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಪುತ್ತಿಲರಿಗೆ ಜಿಲ್ಲೆ/ರಾಜ್ಯ ಘಟಕದಲ್ಲಿ ಸ್ಥಾನ ಸಾಧ್ಯತೆ
ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಹೆಸರನ್ನು ಸಭೆಗೆ ಆಗಮಿಸಿದ ಅಪೇಕ್ಷಿತರು ಸೂಚಿಸಬೇಕಾಗಿತ್ತು. ಸಭೆಯಲ್ಲಿದ್ದ ಪ್ರಮುಖರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಪ್ರತ್ಯೇಕ ಹೆಸರು ಸೂಚಿಸಿದರು. ಎಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಅವರ ಹೆಸರನ್ನು ಸೂಚಿಸಲಾಗಿಲ್ಲ. ಅವರಿಗೆ ಜಿಲ್ಲೆ ಅಥವಾ ರಾಜ್ಯ ಘಟಕದಲ್ಲಿ ಸ್ಥಾನ ನೀಡುವ ನಿಟ್ಟಿನಲ್ಲಿ ಅವರ ಹೆಸರನ್ನು ಸೂಚಿಸಲಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಜು.25ರೊಳಗೆ ಅಧ್ಯಕ್ಷರ ಘೋಷಣೆ ಸಾಧ್ಯತೆ
ರಾಜ್ಯದ ಎಲ್ಲಾ ಕಡೆ ಮಂಡಲದ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪುತ್ತೂರು ಮಂಡಲದಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆ ಬಾಕಿಯಾಗಿತ್ತು. ಇದೀಗ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಆಯ್ಕೆ ಕುರಿತು ಅಭಿಪ್ರಾಯ ಪಡೆದು, ಪ್ರಮುಖರು ಸೂಚಿಸಿದ ಪಟ್ಟಿಯನ್ನು ರಾಜ್ಯಾಧ್ಯಕ್ಷರಿಗೆ ನೀಡಿ ಅಲ್ಲಿಂದ ಆಯ್ಕೆ ಪಟ್ಟಿಯಲ್ಲಿದ್ದವರ ಪೈಕಿಯಿಂದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಆಯ್ಕೆಯನ್ನು ಮಾಡಿ ಜು.25ರೊಳಗೆ ಘೋಷಣೆ ಮಾಡಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here