ಪುತ್ತೂರು: ಸಂಟ್ಯಾರ್ನಲ್ಲಿರುವ ಬಸ್ ತಂಗುದಾಣವೊಂದಕ್ಕೆ ಮರ ಬಿದ್ದು ತಂಗುದಾಣ ಹಾನಿಗೊಳಗಾದ ಘಟನೆ ನಡೆದಿದೆ.ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಟ್ಯಾರ್ ಜಂಕ್ಷನ್ನಲ್ಲಿ ಪುತ್ತೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಸ್ ತಂಗುದಾಣ ನಿರ್ಮಾಣವಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಗಾಳಿಗೆ ಈ ಬಸು ತಂಗುದಾಣದ ಹಿಂದೆ ಇದ್ದ ಮರವೊಂದು ತಂಗುದಾಣದ ಮೇಲೆಯೇ ಬಿದ್ದ ಪರಿಣಾಮ ತಂಗುದಾಣದ ಶೀಟ್ ಅಳವಡಿಸಿದ ಛಾವಣಿ ಬಾಗಿದೆ.ತಂಗುದಾಣ ಹಾನಿಗೊಳಗಾದ ಕಾರಣ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅಸಾಧ್ಯವಾಗಿದೆ.
ಪುತ್ತೂರಿಗೆ ಹೋಗುವ ಪ್ರಯಾಣಿಕರಿಗೆ ಇದೊಂದೇ ತಂಗುದಾಣ
ಸಂಟ್ಯಾರ್ನಲ್ಲಿ ಪುತ್ತೂರಿಗೆ ಹೋಗುವ ಪ್ರಯಾಣಿಕರಿಗೆ ಇದೊಂದೇ ತಂಗುದಾಣವಿದೆ. ಸಂಟ್ಯಾರು ಒಂದು ಕೇಂದ್ರೀಕೃತ ಪ್ರದೇವಾದ ಕಾರಣ ಇಲ್ಲಿ ಇರ್ದೆ ಬೆಟ್ಟಂಪಾಡಿ, ಪಾಣಾಜೆ ಭಾಗದ ಹಲವಾರು ಪ್ರಯಾಣಿಕರು ಪುತ್ತೂರು ಕಡೆಗೆ ಹೋಗಲು ಕಾಯುತ್ತಿರುತ್ತಾರೆ. ಆದಷ್ಟು ಶೀಘ್ರದಲ್ಲಿ ತಂಗುದಾಣ ದುರಸ್ಥಿಯ ಅಗತ್ಯವಿದೆ.