ಕಾಣಿಯೂರು : ಸುನ್ನೀ ಬಾಲ ಸಂಘ ಬೈತಡ್ಕ ರೇಂಜ್ ಮಟ್ಟದ ಕಾರ್ಯಾಗಾರ ರೇಂಜ್ ನ ಕೇಂದ್ರ ಮದ್ರಸ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಬೈತಡ್ಕದಲ್ಲಿ ರೇಂಜ್ ಅಧ್ಯಕ್ಷರಾದ ಲತೀಫ್ ಮುಸ್ಲಿಯಾರ್ ಕೂರತ್ ರವರ ಅಧ್ಯಕ್ಷತೆಯಲ್ಲಿ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರೇಂಜ್ ಮಿಶನರಿ ವಿಭಾಗದ ಅಧ್ಯಕ್ಷ ರಾದ ಅಬ್ದುರ್ರಹ್ಮಾನ್ ಅಹ್ಸನಿ ಮಾಲಂಗೇರಿ ಉದ್ಘಾಟಿಸಿ ರೇಂಜ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಪಳ್ಳತ್ತಾರು ಪ್ರಾಸ್ತಾವಿಕ ಭಾಷಣ ಮಾಡಿದರು.ಬೈತಡ್ಕ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬೈತಡ್ಕ ಶುಭಹಾರೈಸಿದರು. ಬೈತಡ್ಕ ಮುದರ್ರಿಸ್ ಸಫ್ವಾನ್ ಜೌಹರಿ ವಿಧ್ಯಾರ್ಥಿಗಳ ಭಾವಿ ಹಸನಾಗಿಸಲು ಆಕರ್ಷಣ ರೀತಿಯಲ್ಲಿ ತರಗತಿ ಮಂಡಿಸಿದರು. ನೂತನ ಸಮೀತಿ ಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಯ್ಯದ್ ಸ್ವಾದಿಖ್ ತಂಙಳ್ ಪಳ್ಳತ್ತಾರು, ಉಪಾಧ್ಯಕ್ಷರಾಗಿ ಕಳಂದರ್ ಶಾಫಿ ಪುಂಚತ್ತಾರು, ಅಪ್ಸಾದ್ ಕರಿಂಬಿಲ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಲೀತ್ ಬೈತಡ್ಕ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ರಿಹಾಲ್ ಸಮಹಾದಿ, ಶಹೀರ್ ಕಾಪೆಜಾಲು ಕೋಶಾಧಿಕಾರಿಯಾಗಿ ಮುಹಮ್ಮದ್ ತಾಜುದ್ದೀನ್ ಕೂರತ್, ಸಂಘಟನಾ ಕಾರ್ಯದರ್ಶಿಯಾಗಿ ಶಿಹಾಬ್ ಮಾಲಂಗೇರಿ, ಸದಸ್ಯರಾಗಿ ಶಮ್ಮಾಸ್ ಕಲ್ಪಡ ,ವಾಸಿಂ ಬೆಳಂದೂರು, ಅನಸ್ ಗುಂಡಿನಾರು,ಮುಹಮ್ಮದ್ ರಾಶಿದ್ ಪಳ್ಳತ್ತಾರು,ಮುಹಮ್ಮದ್ ಅಸ್ಲಹ್ ಬೈತಡ್ಕ,ಮುಹಮ್ಮದ್ ಶಾಕಿರ್ ಕೂರತ್ ರವನ್ನು ಆರಿಸಲಾಯಿತು. ರೇಂಜ್ ವ್ಯಾಪ್ತಿಯ ಮದ್ರಸಗಳ ಮುದಬ್ಬಿರುಗಳು, ಬೈತಡ್ಕ ಮದ್ರಸದ ಉಸ್ತುವಾರಿ ಅಬೂಬಕ್ಕರ್ ಹಾಜಿ ದಪ್ಪು, ರೇಂಜ್ ಕೋಶಾಧಿಕಾರಿ ಫಾರೂಕ್ ಹಿಮಮಿ ಸಖಾಫಿ ಪುಂಚತ್ತಾರು, ರೇಂಜ್ ನ ಎಲ್ಲಾ ಮದ್ರಸದ ಎಸ್.ಬಿ.ಎಸ್ ನ ಕ್ಯಾಬಿನೆಟ್ ನೂರರಷ್ಟು ವಿಧ್ಯಾರ್ಥಿಗಳು ಹಾಜರಿದ್ದರು. ಮಿಶನರಿ ವಿಭಾಗದ ಕಾರ್ಯದರ್ಶಿ ಮುಹಮ್ಮದ್ ಅನ್ಸಾರ್ ಪಾಳಿಲಿ ಕರಿಂಬಿಲ ಸ್ವಾಗತಿಸಿ ಪರೀಕ್ಷಾ ವಿಭಾಗ ಉಪಾಧ್ಯಕ್ಷರಾದ ಮುಹಮ್ಮದ್ ರಫೀಕ್ ನಿಝಾಮಿ ಸಮಹಾದಿ ವಂದಿಸಿದರು.