ವಲಯಮಟ್ಟದ ಚೆಸ್‌ ಪಂದ್ಯಾಟ: ಬೆಟ್ಟಂಪಾಡಿ ಪ್ರೌಢಶಾಲೆಯ ಅವಿನಾಶ್‌ ಪ್ರಥಮ

0

ಪುತ್ತೂರು: ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಬೆಳಿಯೂರುಕಟ್ಟೆಯಲ್ಲಿ ಆ.7ರಂದು ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಚೆಸ್ ಪಂದ್ಯಾಟದ 17ರ ವಯೋಮಾನದ ಬಾಲಕರ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಬೆಟ್ಟಂಪಾಡಿಯ 10ನೇ ತರಗತಿ ವಿದ್ಯಾರ್ಥಿ ಅವಿನಾಶ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಗುಮ್ಮಟಗದ್ದೆ ರಾಮ ನಾಯ್ಕ, ಪುಷ್ಪಲತಾ ದಂಪತಿಯ ಪುತ್ರ, ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಕೆ.ವಿ. ತರಬೇತು ನೀಡಿರುತ್ತಾರೆ ಎಂದು ಮುಖ್ಯ ಗುರು ವಿಜಯಕುಮಾರ್ ಎಂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here