ಬಡಗನ್ನೂರು ದ.ಕ.ಜಿ.ಪಂ. ಸ.ಉ.ಪಿ.ಪ್ರಾ. ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಬಡಗನ್ನೂರು: ದ.ಕ.ಜಿ.ಪಂ. ಸ.ಉ.ಪಿ.ಪ್ರಾ.ಶಾಲೆ ಬಡಗನ್ನೂರು ಇಲ್ಲಿ 78 ಸ್ವಾತಂತ್ರ್ಯೋತ್ಸವನ್ನು ಅ.15 ರಂದು ಆಚರಣೆ ಮಾಡಲಾಯಿತು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ  ಶತಮಾನೋತ್ಸವ ಸಮಿತಿ ಮುಖ್ಯ ಸಲಹೆಗಾರ ರಾಮಣ್ಣ ಗೌಡ ಬಸವಹಿತ್ತಿಲು,  ಅಟಿಕೂಟ ಸಮಿತಿ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ,  ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ,   ಶಾಲಾ ಎಸ್. ಡಿ. ಯಂ.ಸಿ ಮಾಜಿ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ  ಮಹಾಬಲ ರೈ ಮೇಗಿನಮನೆ  ಶತಮಾನೋತ್ಸವ ಸಮಿತಿ ಜತೆ ಕಾರ್ಯದರ್ಶಿ ಬಾಬು ಬಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು  ಶತಮಾನೋತ್ಸವ ಸಮಿತಿ ಸದಸ್ಯರು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಣಾಭಿಮಾನಿಗಳು ಗ್ರಾಮಸ್ಥರು ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಸ್ವಾಗತಿಸಿ ವಂದಿಸಿದರು., ಸಹ ಶಿಕ್ಷಕಿ ರಮ್ಯಾ ಎಸ್ ಕಾರ್ಯಕ್ರಮ ನಿರೂಪಿಸಿದರು ಸಹ ಶಿಕ್ಷಕಿ  ವಿಜಯಲಕ್ಷ್ಮಿ, ಗೌರವ ಶಿಕ್ಷಕಿ ಸೌಮ್ಯ, ಅತಿಥಿ ಶಿಕ್ಷಕಿ ಮಧುಶ್ರೀ ಸಹಕರಿಸಿದರು. 

LEAVE A REPLY

Please enter your comment!
Please enter your name here