





ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಸಾಯ ಎಂಟರ್ಪ್ರೈಸಸ್ ಹಾಗೂ ಸಾಯ ಮೆಡಿಕಲ್ಸ್ನಲ್ಲಿ ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಖ್ಯಾತ ಚೆಸ್ ತರಬೇತುದಾರ ಸತ್ಯಪ್ರಸಾದ್ ಕೋಟೆ ಇವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಮ್ಹಾಲಕ ಗೋವಿಂದ ಪ್ರಕಾಶ್ ಸಾಯ, ಸಾಯ ಮೆಡಿಕಲ್ನ ಮ್ಹಾಲಕಿ ಸಂಧ್ಯಾ ಸಾಯ ಹಾಗೂ ಸಂಸ್ಥೆಯ ಸಿಬಂದಿಗಳು ಉಪಸ್ಥಿತರಿದ್ದರು. ಸಾಯ ಎಂಟರ್ಪ್ರೈಸಸ್ನ ಶಾಖೆಗಳಾದ ವಿಟ್ಲ, ಮಂಗಳೂರು, ಕಿನ್ನಿಗೋಳಿ, ಮೂಡಬಿದಿರೆ, ಬೆಳ್ತಂಗಡಿ, ಕಡಬ, ಸುಳ್ಯ ಹಾಗೂ ಕಾಸರಗೋಡಿನ ಬದಿಯಡ್ಕ, ಕಾಂಞಗಾಡ್, ಉಪ್ಪಳದಲ್ಲಿ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.















