ಪುತ್ತೂರು: ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಅಕ್ವೇರಿಯಂ ಮೀನು ಫೈಟರ್ ಫಿಶ್ ಸಾಕಾಣಿಕೆಯ ಕುರಿತು ತರಬೇತಿ ಕಾರ್ಯಾಗಾರ ಆ.14ರಂದು ಎಪಿಎಂಸಿ ರಸ್ತೆಯಲ್ಲಿರುವ ಸುದ್ದಿ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಮತ್ಸಕನ್ಯಾ ಅಕ್ವೇರಿಯಂ ನ ಶಶಿಕುಮಾರ್ ಕಾರ್ಕಳ ತನ್ನ ಮನೆಯಲ್ಲಿರುವ ಅಲ್ಪ ಜಾಗದಲ್ಲಿ ಸಾಕುವ ಗಾಜಿನ ಅಥವಾ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಫೈಟರ್ ಫಿಶ್ ಸಾಕಿ ತಿಂಗಳಿಗೆ 3000 ಬಂಡವಾಳದಲ್ಲಿ 10ರಿಂದ 20 ಸಾವಿರ ಸಂಪಾದನೆ ಗಳಿಸುವ ಕುರಿತು ಮಾಹಿತಿ ನೀಡಿದರು.
ಕ್ಷೇವಿಯರ್ ಪುಣಚ, ಹನೀಫ್ ಬೆಳಾಲ್, ಸುರೇಶ್ ಆಲಂಕಾರು, ಸುಷ್ಮಾ ಬಿ ರೈ ವಿಟ್ಲ, ರವಿ ಸುಳ್ಯ, ರಾದೇಶ ಎಂ ಜಿಡೆಕಲ್ಲು, ವಿಠ್ಠಲ್ ಭಟ್ ಕಾರ್ಜಾಲು, ಜಯಲಕ್ಷ್ಮಿ ಭಟ್ ಕಾರ್ಜಾಲು, ಅರಿವು ಕೃಷಿ ಕೇಂದ್ರದ ಹರಿಣಾಕ್ಷಿ, ಚೈತ್ರಾ ಮಧುಚಂದ್ರ ಎಲಿಯ, ಶಿವಕುಮಾರ್ ಸೇರಿದಂತೆ ಹಲವು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.