ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪತ್ರಿಕಾಗೋಷ್ಠಿ

0

ಆ.24 ರಂದು ಸಂಘದ ಮಹಾಸಭೆ

ಆಲಂಕಾರು:ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1976ರ ಪೂರ್ವದಲ್ಲಿ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಕುಂತೂರು ಹಾಗು ಪೆರಾಬೆ ಈ ಆರು ಗ್ರಾಮಗಳ ವ್ಯಾಪ್ತಿಯಲ್ಲಿ 3 ಪತ್ತಿನ ಸಹಕಾರ ಸಂಘಗಳು ವ್ಯವಹಾರ ನಡೆಸಿದ್ದು, 1976-77 ರಲ್ಲಿ ವಿಲೀನಗೊಂಡು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಎಂಬ ಹೆಸರಿನಲ್ಲಿ ಕಳೆದ 48 ವರ್ಷಗಳಿಂದ ಕಾರ್ಯಾಚರಿಸುತ್ತಿದೆ.ಸಂಘವು ಎಲ್ಲಾ ಸಹಕಾರಿಗಳ ಸಹಕಾರದೊಂದಿಗೆ ಸದಸ್ಯರ ಆರ್ಥಿಕ ಆವಶ್ಯಕತೆಗಳನ್ನು ಪೂರೈಸಲು ಸಂಘವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ವರ್ಷಾಂತ್ಯದಲ್ಲಿ ಈ ಸಂಘವು 91.39ಕೋಟಿ ಠೇವಣಿ ಹೊಂದಿರುತ್ತದೆ. ವರದಿ ವರ್ಷದಲ್ಲಿ ರೂ.131.22 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ಸದಸ್ಯರ ಸಾಲದ ಹೊರಬಾಕಿ 146.36 ರೂ ಕೋಟಿ ಇದ್ದು, ವಿತರಿಸಿದ ಸಾಲದ ಪೈಕಿ ಶೇಕಡಾ 98.56 ವಸೂಲಾಗಿರುತ್ತದೆ. ಹಾಗು ರೂ.992.04 ಕೋಟಿಗಳ ಒಟ್ಟು ವ್ಯವಹಾರವನ್ನು ಮಾಡಲಾಗಿದೆ. ಸದಸ್ಯ ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿರುವುದರಿಂದ 2023-24 ನೇ ಸಾಲಿನಲ್ಲಿ ಸಂಘ ರೂ 2,03,80,158.13 ಲಾಭ ಗಳಿಸಿದೆ. ಈ ಸಾಧನೆಗೆ ಸದಸ್ಯರುಗಳ, ನಿರ್ದೇಶಕರುಗಳ ಸಹಕಾರ ಹಾಗು ಮಾರ್ಗದರ್ಶನ ಅಲ್ಲದೆ ನಮ್ಮ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಕಾರಣ ಎಂದು ಹೇಳಲು ಸಂತೋಷಪಡುತ್ತೇನೆ ಎಂದು ತಿಳಿಸಿದ ಅಧ್ಯಕ್ಷರು ಸಂಘದ ಕಾರ್ಯಕ್ಷೇತ್ರದ ಜನರಿಗೆ ಸಮರ್ಪಕವಾಗಿ ಪಡಿತರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದು, ರಾಸಾಯನಿಕ ಗೊಬ್ಬರ ಹಾಗು ಪೈಪ್ ಫಿಟ್ಟಿಂಗ್ಸ್‌ಗಳನ್ನು ಕಾರ್ಯಕ್ಷೇತ್ರದ ಎಲ್ಲಾ ಕೃಷಿಕರಿಗೆ ಸಿಗುವಂತೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ. ರೈತರು ಬೆಳೆಸಿದ ಅಡಿಕೆಯನ್ನು ನ್ಯಾಯಯುತ ಧಾರಣೆಯಲ್ಲಿ ಮಾರಾಟ ಮಾಡಲು, ನಮ್ಮ ಸಂಘದ ಸಹಭಾಗಿತ್ವದೊಂದಿಗೆ ಪೂರ್ಣ ಪ್ರಮಾಣದ ಅಡಿಕೆ ಮಾರಾಟ, ಅಡಿಕೆ ಸಂಸ್ಕರಣಾ ಕೇಂದ್ರವನ್ನು ಕ್ಯಾಂಪ್ಕೊ ಸಂಸ್ಥೆಯು ನಮ್ಮ ಸಂಘದಲ್ಲಿ 2004 ರಿಂದ ಆರಂಭಿಸಿರುತ್ತದೆ. ಕ್ಯಾಂಪ್ಕೊ ಸಂಸ್ಥೆಯ ಮೂಲಕ ರಬ್ಬರ್ ಹಾಗು ಕಾಳುಮೆಣಸು ಮಾರಾಟ ವಿಭಾಗವನ್ನು ಪ್ರಾರಂಭಿಸಿರುತ್ತೇವೆ ಕೊಕ್ಕೊವನ್ನು ವಾರದಲ್ಲಿ ಒಂದು ದಿನ ಮಾರಾಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.ಕೃಷಿಕ ರೈತ ಸದಸ್ಯರು ಬೆಳೆಸಿದ ಬೆಳೆಗೆ ಯೋಗ್ಯವಾದ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ದಾಸ್ತಾನು ಇಡುವವರಿಗೆ ವಿಸ್ತೃತವಾದ ಗೋದಾಮು ಕಟ್ಟಡವನ್ನು ನಿರ್ಮಿಸಲಾಗಿದ್ದು ರೈತ ಸದಸ್ಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಸಂಘದ ಕಾರ್ಯಕ್ಷೇತ್ರದ ಸದಸ್ಯರಿಗೆ, ಸಂಘ ಸಂಸ್ಥೆಗಳಿಗೆ ಮಿತ ದರದ ಸೇಫ್ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಸಂಘದ ಭದ್ರತೆಗಾಗಿ ಆಲಂಕಾರು ಪ್ರಧಾನ ಕಛೇರಿ, ಕೊಯಿಲ ಮತ್ತು ಕುಂತೂರು ಶಾಖೆಯಲ್ಲಿ ಸಿ.ಸಿ.ಟಿ.ವಿಯನ್ನು ಮತು ಸೈರನ್ ಅಳವಡಿಸಲಾಗಿದೆ. ಹಾಗೂ ಮುಖ್ಯ ಕಛೇರಿ, ಕೊಯಿಲ ಮತ್ತು ಕುಂತೂರು ಶಾಖೆಯಲ್ಲಿ ರಾತ್ರಿ ಪಹರೆ ವ್ಯವಸ್ಥೆಯನ್ನು ಮಾಡಲಾಗಿದೆ; ಸಂಘದಲ್ಲಿರುವ ಎಲ್ಲಾ ದಾಸ್ತಾನುಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಮದುವೆ ಹಾಗು ಇತರ ಸಮಾರಂಭಗಳಿಗೆ ಸುಸಜ್ಜಿತವಾದ ರೈತ ಸಭಾ ಭವನ ವ್ಯವಸ್ಥೆ ರೈತ ಸದಸ್ಯರ ಅವಶ್ಯಕತೆ ಮನಗಂಡು ಸಂಘದ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಯೋಗದೊಂದಿಗೆ ನೆಪ್ಟ್ / ಆರ್.ಟಿ.ಜಿ.ಎಸ್ ಸೌಲಭ್ಯವನ್ನು ನೀಡಲಾಗಿದೆ. ಸದಸ್ಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ ಹಾಗು ಸಂಘದ ಶಾಖೆಗಳಲ್ಲಿ ಖರೀದಿಗಾಗಿ ಕ್ಯಾಶ್‌ಲೆಸ್ ಸೌಲಭ್ಯವನ್ನು ಕೂಡ ಅಳವಡಿಸಲಾಗಿದೆ. ಪ್ರಸಕ್ತ ಆಡಳಿತ ಮಂಡಳಿಯು ಮಾರ್ಚ್2020 ರಲ್ಲಿ ಆಡಳಿತ ವಹಿಸಿಕೊಂಡಿದ್ದು, ನಮ್ಮ ಆಡಳಿತಾವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಎಲ್ಲಾ ಜನರಿಗೆ ಮಿತ ದರದಲ್ಲಿ ದಿನಸಿ ಸಾಮಾಗ್ರಿಗಳನ್ನು ಪೂರೈಕೆ ಮಾಡಬೇಕೆಂಬ ಸದುದ್ದೇಶದಲ್ಲಿ ಮೂರು ಶಾಖೆಗಳಲ್ಲಿ ದಿನಸಿ ವ್ಯಾಪಾರ ಆರಂಭಿಸಿ ಬಹಳಷ್ಟು ಜನರಿಗೆ ಇದರ ಪ್ರಯೋಜನ ದೊರೆತಿದೆ. ಅಲ್ಲದೆ ಸಂಘದ ಸದಸ್ಯರಿಗೆ ಹಾಗು ರೈತಾಪಿ ವರ್ಗದ ಅನುಕೂಲತೆಗಾಗಿ ನ್ಯಾಯಯುತ ಬಾಡಿಗೆ ದರದಲ್ಲಿ ಸಾಮಾಗ್ರಿಗಳನ್ನು ಸಾಗಾಟ ಮಾಡುವ ಸಲುವಾಗಿ ಸಂಘದಲ್ಲಿ ಪಿಕ್‌ಅಪ್ ವಾಹನ ಸೌಲಭ್ಯವನ್ನು ಮಾಡಲಾಗಿದೆ. ಅಲ್ಲದೇ ಕಾಳು ಮೆಣಸು ಬೇರ್ಪಡಿಸುವ ಯಂತ್ರವೂ ಕೂಡ ಮಿತ ದರದ ಬಾಡಿಗೆಯಲ್ಲಿ ಲಭ್ಯವಿದೆ
ಸಂಘದ ಸದಸ್ಯರಿಗೆ ವಿಮಾ ಸೌಲಭ್ಯ ಕಲ್ಪಿಸುವ ಸಲುವಾಗಿ ಸುವರ್ಣ ಸಹಕಾರ ನಿಧಿಯನ್ನು ನಮ್ಮ ಆಡಳಿತಾವಧಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ವರದಿ ಸಾಲಿನಲ್ಲಿ 19 ಅರ್ಹ ಸಾಲಗಾರ ರೈತ ಸದಸ್ಯರು ರೂ.235000/- ಪರಿಹಾರ ಪಡೆದುಕೊಂಡಿರುತ್ತಾರೆ. ಪ್ರಧಾನ ಕಛೇರಿ ಹಾಗು ಕುಂತೂರು ಶಾಖಾ ಪ್ರಾಂಗಣಕ್ಕೆ ಸ್ವಚ್ಚತೆ ಕಾಪಾಡಿಕೊಳ್ಲುವ ದೃಷ್ಟಿಯಿಂದ ಇಂಟರ್‌ಲಾಕ್ ಅಳವಡಿಸಲಾಗಿದೆ, ಹಾಗೆಯೇ ಪ್ರಧಾನ ಕಚೇರಿಯ ಬ್ಯಾಂಕಿಂ ವಿಭಾಗ ಹಾಗು ದೀನದಯಾಳು ಸಭಾಭವನಕ್ಕೆ ಲಿಫ್ಟ್ ಸಂಪರ್ಕ ನೀಡಲಾಗಿದೆ ಹಳೆನೇರೆಂಕಿ ಭಾಗದ ರೈತಾಪಿ ವರ್ಗದ ಅನುಕೂಲಕ್ಕಾಗಿ ಜಾಗ ಖರೀದಿಸಿ ಸುಸಜಿತ್ತವಾದ ಗೋದಾಮು ಹಾಗು ಶಾಖಾ ಕಟ್ಟಡ ನಿರ್ಮಿಸಲಾಗಿ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿ ಆ.24 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಛೇರಿಯಲ್ಲಿರುವ ದೀನದಯಾಳ್ ರೈತ ಸಭಾಭವನದಲ್ಲಿ ಬೆಳಿಗ್ಗೆ 10:30 ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದೆ ಈ ಸಭೆಗೆ ಸಂಘದ ಸದಸ್ಯರೆಲ್ಲರೂ ಭಾಗವಹಿಸುವಂತೆ ಸಂಘದ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ ಸ್ವಾಗತಿಸಿ, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ .ಡಿ ಧನ್ಯವಾದ ಸಮರ್ಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಜಿ.ಪಿ ಶೇಷಪತಿ ರೈ,ಸುಧಾಕರ ಪೂಜಾರಿ, ರಾಮಚಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here