ಆರ್ಲಪದವು ಡಾ. ಹಾಜಿ .ಎಸ್. ಅಬೂಬಕರ್ ಅವರಿಗೆ “ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ”

0

ಪುತ್ತೂರು: ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀಮಾತಾ ಪ್ರಕಾಶನ ಕರ್ನಾಟಕ ಬಳ್ಳಾರಿ ಇದರ ಆಶ್ರಯದಲ್ಲಿ ಸಾಧಕರಿಗೆ ನೀಡಲ್ಪಡುವ ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ ಗೆ ಡಾ ಹಾಜಿ ಯಸ್ ಅಬೂಬಕ್ಕರ್ ಅರ್ಲಪದವು ಆಯ್ಕೆಗೊಂಡಿರುತ್ತಾರೆ.

ಇವರು ತನ್ನ ಜೀವನದಲ್ಲಿ ಮಾಡಿದ ಸೇವೆಗಳನ್ನು ಗುರುತಿಸಿ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್, ಭಾರತ ವಿಕಾಸ ರತ್ನ , ಕನ್ನಡ ಶ್ರೀ ರಾಷ್ಟ್ರ ಪ್ರಶಸ್ತಿ, ವಿಶ್ವಮಾನವ ಸಂದೇಶ ಪ್ರಶಸ್ತಿ, ಸೇರಿದಂತೆ ಸುಮಾರು 170 ಕ್ಕಿಂತ ಹೆಚ್ಚು ಪ್ರಶಸ್ತಿ ಲಭಿಸಿದೆ.

ಪ್ರಸಕ್ತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ ಜಿಲ್ಲಾಧ್ಯಕ್ಷರಾಗಿ ವಿಎಲ್ ಇ ಸೊಸೈಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ಫಿಲೋಮಿನಾ ಕಾಲೇಜು ಇದರ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ, ಸುಬೋಧ ಪ್ರೌಢಶಾಲಾ ರಕ್ಷಕ ಶಿಕ್ಷಕ ಅಧ್ಯಕ್ಷರಾಗಿ ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ, ಸೀರತ್ ಕಮಿಟಿ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತು ಆಡಳಿತ ಸಮಿತಿ ಸದಸ್ಯರಾಗಿ ,ಜಮೀಯ್ಯತುಲ್ ಫಲಾಹ್ ಅಜೀವ ಸದಸ್ಯರಾಗಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿಯಾಗಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ಕರ್ನಾಟಕ ಗಡಿನಾಡ ಸಮ್ಮೇಳನದ ರೂವಾರಿಯೂ ಆಗಿದ್ದಾರೆ.


ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 25ರಂದು ಹಂಪಿ ಶ್ರೀ ಸದ್ಗುರು ಶಿವರಾಮ ಅವಧೂತರ ಆಶ್ರಮ ದಕ್ಷಿಣ ಕಾಶಿ ಹೇಮಕೂಟ ಇಲ್ಲಿ ಶ್ರೀ ವಿದ್ಯಾನಂದ ಭಾರತಿ ಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಪರಮಪೂಜ್ಯ ಡಾ. ಅವಧೂತ ಮಹರ್ಷಿ ಸಿದ್ದಾಂತ ಸ್ವಾಮೀಜಿ ಇವರ ಆಶೀರ್ವಚನದಲ್ಲಿ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here