ಕಾಂಚನ:ವಿಕ್ರಂ ಯುವಕ ಮಂಡಲದ ಆಶ್ರಯದಲ್ಲಿ 27ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

0

ಕಾಂಚನ: ವಿಕ್ರಂ ಯುವಕ ಮಂಡಲದ ಆಶ್ರಯದಲ್ಲಿ 27ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾಂಚನ ಸಂಗೀತ ಶಾಲೆಯ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು.

ಸಭಾ ಕಾರ್ಯಕ್ರಮದ ಅತಿಥಿಗಳಾಗಿ ಕಾಂಚನ ಪ್ರೌಢಶಾಲೆ ಮುಖ್ಯಗುರು ರಮೇಶ್ ಮಯ್ಯ ಮತ್ತು ಪ್ರಾಥಮಿಕ ಶಾಲಾ ಮುಖ್ಯಗುರು ಲಕ್ಷ್ಮಣ ಗೌಡ,ಭಾಗವಹಿಸಿದ್ದರು. ಅಧ್ಯಕ್ಷತೆ ವಿಕ್ರಂ ಯುವಕ ಮಂಡಲ ಅಧ್ಯಕ್ಷ ರಾಮಚಂದ್ರ ಕಾಂಚನ ವಹಿಸಿದ್ದರು. ವೇದಿಕೆಯಲ್ಲಿ ಅನಿಲ್ ಪಿಂಟೊ ಪುಯಿಲ , ಮೋನಪ್ಪ ಗೌಡ ಪುಯಿಲ ಉಪಸ್ಥಿತರಿದ್ದರು.

ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಕೇಶವ ಅಗರ್ತಿಮಾರು, ಭದ್ರಪ್ಪ ಅಗರ್ತಿಮಾರು, ಸುರೇಶ್ ಬಿದಿರಾಡಿ, ಪ್ರಸಾದ್ ಅಗರ್ತಿಮಾರು,ಉಮೇಶ್ ನೆಕ್ಕರೆ, ಗಂಗಾಧರ್, ರಮೇಶ್, ದುಗ್ಗಪ್ಪ ಅಗರ್ತಿಮಾರು, ರಾಜೇಶ್ ನಡ್ಪ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಅಡ್ಡ ಕಂಬ ಜಾರುವ ಸ್ಪರ್ಧೆಗೆ ನಿವೃತ್ತ ಪೊಲೀಸ್ ಅಧಿಕಾರಿ ಪದ್ಮಯ್ಯ ಡೆಂಬಲೆ, ವಾಲಿಬಾಲ್ ಪಂದ್ಯಾಟಕ್ಕೆ ಬಾಬು ಗೌಡ ಆಗರ್ತಿಮಾರು ಮತ್ತು ಇತರ ಸ್ಪರ್ಧೆಗೆ ತಿಮ್ಮಪ್ಪ ಬಿದಿರಾಡಿ ಮಡಿಕೆ ಒಡೆಯುವ ಮೂಲಕ ಆಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಕ್ರಂ ಯುವಕ ಮಂಡಲ ಮತ್ತು ದಿವಂಗತ ಎ.ಬಿ.ಪ್ರಕಾಶ್ ಧರ್ಮ ಪತ್ನಿ ಜಲಜಾಕ್ಷಿ ಅವರ ಜಂಟಿ ಸಹಭಾಗಿತ್ವದಲ್ಲಿ ಸ್ಥಳೀಯ ಕಾಂಚನ ಶಿಕ್ಷಣ ಸಂಸ್ಥೆಗಳ 4 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹದಿನಾರು ಸಾವಿರ ರೂಪಾಯಿಗಳ ಆರ್ಥಿಕ ಸಹಾಯದ ಹಸ್ತಾಂತರ ನಡೆಯಿತು.

ಕಾರ್ಯದರ್ಶಿ ಗಿರೀಶ್ ಮುದ್ಯ ಸ್ವಾಗತಿಸಿ , ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ನ ವೇಶ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ,ಪುರುಷರಿಗೆ , ಮಹಿಳೆಯರಿಗೆ ಶ್ರೀ ಕೃಷ್ಣ ನ ಹಾಡು,ಅದೃಷ್ಟದ ಆಟ, ಹಗ್ಗಜಗ್ಗಾಟ, ವಾಲಿಬಾಲ್, ತ್ರೋಬಾಲ್, ಸಂಗೀತ ಕುರ್ಚಿ, ಬಕೆಟ್ ಗೆ ಬಾಲ್ ಹಾಕುವ ,ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆಗಳು ನಡೆಯಿತು.

ಹೇಮಂತ್ ನೆಕ್ಕರೆ, ಸಚಿನ್ ಮುದ್ಯ , ಗಿರೀಶ್ ಮುದ್ಯ, ಜಯರಾಮ ಪದಕ, ತ್ಯಾಗ ರಾಜ್ ಕಾಂಚನ, ನವೀನ್ ಪುಯಿಲ, ರಾಮಣ್ಣ ಪುಯಿಲ, ದಯಾನಂದ, ರಾಜೇಶ್, ಧನಂಜಯ, ರಾಮಚಂದ್ರ, ಆಟೋಟ ಸ್ಪರ್ಧೆಗಳ ನಿರ್ವಹಣೆಗೆ ಸಹಕರಿಸಿದರು.

ಹೊನ್ನಪ್ಪ ಪುಯಿಲ ,ಎಲ್ಯಣ್ಣ ಶಿವಪುರ, ಮನೋಜ್, ಶ್ರೀನಿವಾಸ, ಬಾಲಕೃಷ್ಣ, ದೇವಪ್ಪ ಪದಕ, ಜಗದೀಶ್ ಮಣಿಕ್ಕೆ,ಗಿರಿಯಪ್ಪ ಪದಕ ಸಹಕರಿಸಿದರು. ಉಪ್ಪಿನಂಗಡಿ ಆರಕ್ಷಕ ಠಾಣೆಯ ಸಿಬ್ಬಂದಿಗಳು, ವಿಕ್ರಂ ಯುವಕ ಮಂಡಲದ ಪೂರ್ವಾಧ್ಯಕ್ಷ ಡೆನ್ನಿಸ್ ಪಿಂಟೊ, ಶಿವರಾಂ ಕಾರಂತ, ಶ್ರೀಧರ್ ಮುದ್ಯ , ಬಾಲಕೃಷ್ಣ ನಾಯ್ಕ,ಹರೀಶ್ಚಂದ್ರ ಮುದ್ಯ, ಮಹೇಶ್ ಬಜತ್ತೂರು,ಚಂದ್ರಶೇಖರ , ಮುಕುಂದ ಬಜತ್ತೂರು, ಬಾಲಕೃಷ್ಣ,ಪ್ರಸಾದ್ ಬಜತ್ತೂರು,ಗೋಪಾಲ ದಡ್ಡು, ಪ್ರಮೋದ್ ನಾಯಿಲ, ಹರೀಶ್ ಉರಾಬೆ, ದಿನೇಶ್ ನಡ್ಪ, ಶ್ರೀವತ್ಸ, ರುಕ್ಮಯ ಪುಯಿಲ ಸ್ಥಳೀಯ ಶಾಲಾ ಮಕ್ಕಳು,ಶಿಕ್ಷಕ ವರ್ಗ, ಪೋಷಕರು ಸೇರಿದಂತೆ 600 ಮಿಕ್ಕಿ ಜನರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here