





ಸಹಜ್ ರೈ ಬಳಜ್ಜ ಮುಂದಾಳತ್ವದಲ್ಲಿ ಸಮಾಜ ಸೇವೆಗೆಂದೇ ಐದು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ʼವಿಜಯ್ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು, ಇದರ ನೇತೃತ್ವದಲ್ಲಿ ಇದೇ ಅಕ್ಟೋಬರ್ ತಿಂಗಳ 5 ಮತ್ತು 6ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ʼಪಿಲಿಗೊಬ್ಬು -2024ʼ ಸೀಸನ್ -2 ಹಾಗೂ ʼಪುತ್ತೂರು ಫುಡ್ ಫೆಸ್ಟ್ʼ ವಿಜೃಂಭಣೆಯಿಂದ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಸೆ.೦೧ರ ಭಾನುವಾರದಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ…












