ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ಗ್ರಾಮ ಸಮಿತಿಯಿಂದ ಬಿರುವೆರ್ನ ಕೆಸರ್ದ ಗೊಬ್ಬು

0

ಸರುಗದ್ದೆ ತುಳುನಾಡಿನ ಹೆಮ್ಮೆಯ ಪ್ರತೀಕ-ಸತೀಶ್ ಕುಮಾರ್ ಕೆಡೆಂಜಿ

ಪುತ್ತೂರು:(ಹಿರೇಬಂಡಾಡಿ) ಪರಶುರಾಮನ ಸೃಷ್ಟಿಯಿಂದ ರಚಿತವಾದ ಈ ತುಳುನಾಡಿನ ಪ್ರತಿಯೊಂದು ಆಚಾರ ವಿಚಾರಗಳಿಗೆ ಆದರದ್ದೆ ಆದ ಮಹತ್ವ ಹಾಗೂ ಪ್ರಾಧಾನ್ಯವಿದೆ. ಹಿರಿಯರು ಕೃಷಿ ಬದುಕನ್ನು ಭಾವನಾತ್ಮಕವಾಗಿ ನಂಬಿ ಅದರ ಮೇಲೆ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ತುಳುನಾಡಿನ ಕೃಷಿ ಪರಂಪರೆಯ ಬಗ್ಗೆ,  ಮುಂದಿನ ಯುವ ಪೀಳಿಗೆಗೆ  ಕೆಸರುಗದ್ದೆಯ ಮಹತ್ವವನ್ನು ತಿಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.

ಅವರು ಸೆ.1ರಂದು ಎಲಿಯ ಗಂಗಾಧರ ಪೂಜಾರಿ ಇವರ ಗದ್ದೆಯಲ್ಲಿ ಹಿರೇಬಂಡಾಡಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ಗ್ರಾಮ ಸಮಿತಿ ಇದರ ವತಿಯಿಂದ ನಡೆದ 2ನೇ ವರ್ಷದ ಬಿರುವೆರೆನ ಕೆಸೆರ್ದ ಗೊಬ್ಬು ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿದ ನಿವೃತ್ತ ಯೋಧರಾದ ಗುಣಕರ ಕೆರ್ನಡ್ಕ ಇವರು ಗ್ರಾಮ ಸಮಿತಿಯ ವತಿಯಿಂದ ಸಮಾಜಮುಖಿ ಚಿಂತನೆಯ ಕಾರ್ಯಗಳಿಗೆ ಸಮಿತಿಯನ್ನು ಅಭಿನಂದಿಸಿ ಶುಭ ಹಾರೈಸಿದರು.

ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ವರದರಾಜ್ ಎಂ ಇವರು, ತೆಂಗಿನ ಕೊಂಬು ಅರಳಿಸಿ ಕೆಸರ್ದ ಗೊಬ್ಬು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.  ಕೆಸರಿನ ಗದ್ದೆಗೆ ಪ್ರವೇಶವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ದೈವದ ಮಧ್ಯಸ್ಥರಾದ ವಿನೋದ್ ಬೊಂಟ್ರಪಾಲ್ ಹಾಗೂ ಹಿರೇಬಂಡಾಡಿ ಷಣ್ಮುಖ ದೇವಸ್ಥಾನದ ವ್ಯಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಗದ್ದೆ ಹಾಲು ಎರೆಯುವ ಮೂಲಕ ಗದ್ದೆಗೆ ಇಳಿದು ಎಲ್ಲರಿಗೂ ಕೆಸರಿನ ಗೊಬ್ಬುವಿಗೆ ಅನುವು ಮಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಸಮಿತಿಯ ಅಧ್ಯಕ್ಷರಾದ ನವೀನ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಿತಿಯ ಅಧ್ಯಕ್ಷೆ ವಿದ್ಯಾ ನಿಡ್ಡೆಂಕಿ, ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ಬಂಗೇರ, ಕಾರ್ಯದರ್ಶಿ ಚಂದ್ರಶೇಖರ, ಸ್ಥಳದಾನಿಗಳಾದ ಗಂಗಾಧರ ಎಲಿಯ, ಬಜತ್ತೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಸೋಮ ಸುಂದರ ಕೊಡಿಪಾನ ಉಪಸ್ಥಿತರಿದ್ದರು. 

ಸಮಾರೋಪ;

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಆತಿಥಿಗಳಾಗಿ ಉಪ್ಪಿನಂಗಡಿಯ ಉದ್ಯಮಿ ಗುಣಕರ ಆಗ್ನಾಡಿ, ಇನ್ನೋರ್ವ ಉದ್ಯಮಿಗಳು ಆದ ಕೆ.ಟಿ.ಪೂಜಾರಿ ಕೆರ್ನಡ್ಕ ಉಪಸ್ಥಿತರಿದ್ದು ಶುಭ ಹಾರೈಸಿದರು.

ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಾಂಭವಿ ಸುರೇಶ್, ಉಪ್ಪಿನಂಗಡಿ ಗ್ರಾಮ ಸಮಿತಿಯ ಅಧ್ಯಕ್ಷರಾದ ವಸಂತ ಕುಕ್ಕುಜೆ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ನವೀನ್ ಪಡ್ಪು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಿಧೀಕ್ಷಾ, ಆಧ್ಯಾ , ನೇಹ, ರೇಶ್ಮಾ ಹಾಗೂ ಸನ್ನಿಧಿ ಪ್ರಾರ್ಥಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕಾರೆದಕೋಡಿ ಸ್ವಾಗತಿಸಿ, ಅಶೋಕ್ ಕುಮಾರ್ ಪಡ್ಪು ವಂದಿಸಿದರು.  ಕು.ಪೂರ್ಣಿಮಾ, ಕು. ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here