ಪುತ್ತೂರು: ಕೂಡುರಸ್ತೆಯಿಂದ ತಿಂಗಳಾಡಿಗೆ ಹೋಗುವ ರಸ್ತೆ ಬದಿಯಲ್ಲಿ ಧರೆ ಕುಸಿದು ಮಣ್ಣು ರಸ್ತೆಯಲ್ಲೇ ತಿಂಗಳಿನಿಂದ ಬಾಕಿಯಾಗಿದ್ದು ಅದನ್ನು ಸೆ.3ರಂದು ಮುಂಡೂರು ಗ್ರಾ.ಪಂ ವತಿಯಿಂದ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ತಿಂಗಳ ಹಿಂದೆ ಧರೆ ಕುಸಿದು ಮಣ್ಣು ರಸ್ತೆ ಬದಿಯಲ್ಲಿ ಹಾಗೂ ರಸ್ತೆಗೆ ಬಿದ್ದಿದ್ದು ಅದನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯುಂಟಾಗಿತ್ತಲ್ಲದೇ ಅಪಘಾತ ಸಂಭವಿಸುವ ಸಾಧ್ಯತೆಯೂ ಇತ್ತು. ಈ ಬಗ್ಗೆ ಸೆ.2ರಂದು ಸುದ್ದಿ ವೆಬ್‌ಸೈಟ್ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ವರದಿಗೆ ಕೂಡಲೇ ಸ್ಪಂದಿಸಿರುವ ಮುಂಡೂರು ಗ್ರಾಮ ಪಂಚಾಯತ್ ಆ.3ರಂದು ಬೆಳಿಗ್ಗೆ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ.