Kadaba: ನಿವೃತ್ತ ಸೈನಿಕ ಅಂಗಣ ಸುಂದರ ಗೌಡ ನಿಧನ

0

ಕಡಬ: ನಿವೃತ್ತ ಸೈನಿಕ ಅಂಗಣ ಸುಂದರ ಗೌಡ (60ವ.) ಅವರು ಸೆ.13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ, ಸೆ.12ರಂದು ಹೃದಯಾಘಾತವಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ (AJ Hospital) ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಇವರು ಪಿಜಕ್ಕಳ‌ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸಕ್ರೀಯ ಸದಸ್ಯರಾಗಿ ಕಡಬದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಮೂಲತಃ ಚಾರ್ವಾಕ ಗ್ರಾಮದ ನಿವಾಸಿಯಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here