ಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ನಗರಸಭೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಸಂ.ಪಿ ಕಾಲೇಜು ಪುತ್ತೂರು, ಸ.ಪ.ಪೂ. ಕಾಲೇಜು ಕೊಂಬೆಟ್ಟು ಪುತ್ತೂರು, ಅಶ್ವತ್ಥಕಟ್ಟೆ ದೇವತಾ ಸಮಿತಿ ಯರ್ಮುಂಜಪಳ್ಳ ಪಡ್ನೂರು, ಶ್ರೀ ಧೂಮಾವತಿ ಯುವಕ ಮಂಡಲ ಜುಮಾದಿಪಲ್ಕೆ, ಪಡ್ನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆ.21ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಅಶೋಕ್ ಕುಮಾರ್ ರೈರವರ ನೇತೃತ್ವದಲ್ಲಿ ಜರಗಲಿದೆ.
ಅಧ್ಯಕ್ಷತೆಯನ್ನು ಪುತ್ತೂರು ನಗರಸಭಾ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಅಣ್ಣು ನಾಯ್ಕರವರು ವಹಿಸಿಕೊಳ್ಳಲಿದ್ದು, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಧ್ವಜಾರೋಹಣವನ್ನು ನೆರವೇರಿಸಲಿದ್ದು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಕ್ರೀಡಾ ಜ್ಯೋತಿ ಬೆಳಗಿಸಲಿದ್ದು, ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತಲಿದ್ದಾರೆ.
ಸೆ.21ರಂದು ಪುರುಷ/ಮಹಿಳೆಯರಿಗೆ ಸ್ಪರ್ಧೆಗಳು:
ಕಬಡ್ಡಿ, ಖೋ-ಖೋ, ವಾಲಿಬಾಲ್, ತ್ರೋಬಾಲ್, ಫುಟ್ಬಾಲ್, ಅಥ್ಲೆಟಿಕ್ಸ್ (100ಮೀ.,200ಮೀ.,400ಮೀ., 800ಮೀ., 1,500ಮೀ., 5,000ಮೀ., ಶಾಟ್‌ಪುಟ್, ಉದ್ದ ಜಿಗಿತ,
ಎತ್ತರ ಜಿಗಿತ, ಜಾವೆಲಿನ್ ತ್ರೋ, ಡಿಸ್ಕಸ್ ತ್ರೋ, ಟ್ರಿಪಲ್‌ಜಂಪ್, 4100ಮೀ ಮತ್ತು 4400ಮೀ ರಿಲೇ), ಮಹಿಳೆಯರಿಗೆ ಕಬಡ್ಡಿ, ಖೋ-ಖೋ, ವಾಲಿಬಾಲ್, ತ್ರೋಬಾಲ್, ಅಥ್ಲೆಟಿಕ್ಸ್ (100ಮೀ., 200ಮೀ., 400ಮೀ., 800ಮೀ., 1,500ಮೀ., 3,000ಮೀ.) ಶಾಟ್‌ಪುಟ್, ಉದ್ದ ಜಿಗಿತ, ಎತ್ತರ ಜಿಗಿತ, ಜಾವೆಲಿನ್ ತ್ರೋ, ಡಿಸ್ಕಸ್ ತ್ರೋ, ಟ್ರಿಪಲ್‌ಜಂಪ್ ಮತ್ತು 4100ಮೀ, 4400ಮೀ. ರಿಲೇ) ನಡೆಯಲಿರುವುದು.
ವಿಶೇಷ ಸೂಚನೆ: ಪಂದ್ಯಾಟದ ಉದ್ಘಾಟನೆಯ ಮುಂಚಿತವಾಗಿ ಎಲ್ಲಾ ಸ್ಪರ್ಧೆಗಳು ಪ್ರಾರಂಭವಾಗಲಿದೆ. ಬೆಳಿಗ್ಗೆ 8-30ಕ್ಕೆ ಪುರುಷರ ವಿಭಾಗದ 5000 ಮೀ. ಓಟ ಮತ್ತು ಮಹಿಳೆಯರ
ವಿಭಾಗದ 3000ಮೀ. ಓಟ ಸ್ಪರ್ಧೆಗಳು ನಡೆಯಲಿರುವುದು ಹಾಗೂ ಇತರ ವೈಯುಕ್ತಿಕ ಕ್ರೀಡಾ ಸ್ಪರ್ಧೆಗಳು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯಲಿರುವುದು, ಆದುದರಿಂದ ಎಲ್ಲಾ ಸ್ಪರ್ಧಿಗಳು ಬೆಳಿಗ್ಗೆ 8 ಗಂಟೆಗೆ ಸರಿಯಾ ಕ್ರೀಡಾಂಗಣದಲ್ಲಿ ಹಾಜರಿರುವುದು. ಭಾಗವಹಿಸುವವರು ಸ್ಥಳದಲ್ಲೇ ನೋಂದಾಯಿಸುವುದು. ಗುಂಪಾಟ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡದವರು 9 ಗಂಟೆಯ ಒಳಗಾಗಿ ಸ್ಥಳದಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. 9-30 ಗಂಟೆಗೆ ಸರಿಯಾಗಿ ತಳುಕು (Fixture) ಹಾಕುವುದರಿಂದ ನಂತರ ಬಂದ ಯಾವುದೇ ತಂಡದವರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ಯುವ ಸಬಲೀಕರಣ ಕ್ರೀಡಾ ಇಲಾಖೆಯ ನೋಡಲ್ ಅಧಿಕಾರಿ ಮಾಮಚ್ಚನ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಡದ ಹೆಸರನ್ನು ನೋಂದಾಯಿಸಲು ಡಾ. ಎಲ್ಯಾಸ್ ಪಿಂಟೊ ದೈಹಿಕ ಶಿಕ್ಷಣ ನಿರ್ದೇಶಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇವರನ್ನು ಸಂಪರ್ಕಿಸುವುದು ಮೊ: 9448549616
ಹೆಚ್ಚಿನ ಮಾಹಿತಿಗಾಗಿ ಮೊ: 8746845280
ನೇರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳು:
ಬಾಸ್ಕೆಟ್‌ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ಟೆನ್ನಿಸ್, ನೆಟ್‌ಬಾಲ್, ಈಜು, ಯೋಗ, ಹರ್ಡಲ್ಸ್