ರೂ.19,08,918 ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ
ಪುತ್ತೂರು: ಟಿಎಪಿಸಿಎಂಎಸ್ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯು ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತುರವರ ಅಧ್ಯಕ್ಷತೆಯಲ್ಲಿ ಸೆ.19 ರಂದು ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳಿಯಪ್ಪ ಗೌಡ 2023-24 ನೇ ಸಾಲಿನ ವರದಿ ಮಂಡಿಸಿದರು. ಸಂಘವು 2023-24 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲಾ ವ್ಯವಹಾರಗಳಿಂದ ಒಟ್ಟು ರೂ.19,09,918.82 ಲಕ್ಷ ನಿವ್ವಳ ಲಾಭ ಗಳಿಸಿದ್ದು ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಹೇಳಿದರು. ಪ್ರಸ್ತುತ ಸಂಘವು ನಿರಂತರ ಪ್ರಗತಿಯಡಿಯಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಸಂಘದ ಸದಸ್ಯರ, ಠೇವಣಿದಾರರ ಗ್ರಾಹಕರ ಅತ್ಯಮೂಲ್ಯ ಸಹಕಾರ ಹಾಗೂ ಸಿಬ್ಬಂಧಿ ವರ್ಗದವರ ಶ್ರಮ ಮತ್ತು ಎಲ್ಲಾ ಸಹಕಾರಿ ಬಂಧುಗಳ ಕೊಡುಗೆಯೇ ಕಾರಣ ಎಂದು ಹೇಳಿದ ಅಧ್ಯಕ್ಷರು ಸಂಘದ ಬೆಳವಣಿಗೆಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಎಸ್.ಬಿ.ಜಯರಾಮ ರೈಯವರು ಸಂಘದ ಬೆಳವಣಿಗೆಗೆ ವಿವಿಧ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ್, ನಿರ್ದೇಶಕರುಗಳಾದ ಸಾಜ ರಾಧಾಕೃಷ್ಣ ಆಳ್ವ,ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಶೇಖರ ತಾಳ್ತಜೆ, ಎಸ್.ಸುಭಾಸ್ ನಾಯಕ್, ಮೊಹಮ್ಮದ್ ಆಶ್ರಫ್ ಕಲ್ಲೇಗ, ಸುಜಾತ ರಂಜನ್ ರೈ, ನೇತ್ರಾವತಿ ಪಿ.ಗೌಡ, ಬಿ.ಜಯರಾಮ ರೈ ಬಾಲಾಯ, ಪ್ರದೀಪ್ ರೈ ಎಂ, ಪೊಡಿಯ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದ್ದರು.