ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇದರ ಆಶ್ರಯದಲ್ಲಿ ಯಕ್ಷರಂಗ ಪುತ್ತೂರು, ದ. ಕ. ಇದರ ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ (ರಿ.) ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗ ಇವರ ಸಹಭಾಗಿತ್ವದೊಂದಿಗೆ ಯಕ್ಷಗಾನ ತಾಳಮದ್ದಳೆ ಅ.2ರಂದು ದಿನ ಪೂರ್ತಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರಗಲಿದೆ.
ಪೂರ್ವಾಹ್ನ ಗಂಟೆ 9.30ರಿಂದ ಯಕ್ಷಗಾನ ಹವ್ಯಕ ತಾಳಮದ್ದಳೆ – 1: ’ಆ-ರತಿ ಮದುವೆ’ (ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ) ಹಿಮ್ಮೇಳದಲ್ಲಿ ಭಾಗವತರು: ಪುತ್ತೂರು ರಮೇಶ ಭಟ್, ಸಿಂಚನಾ ಮೂಡುಕೋಡಿ ಮೃದಂಗ: & ಚೆಂಡೆ- ಚಂದ್ರಶೇಖರ ಕೊಂಕಣಾಜೆ, ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು ಗಣೇಶ ಭಟ್ ಬೆಳ್ಳಾರೆ, ಅದ್ವೈತ್ ಕನ್ಯಾನ ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಮ ಭಟ್ಟ, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ, ಹರೀಶ ಬಳಂತಿಮೊಗರು, ಸಾವಿತ್ರಿ, ಉದಯ ನಯನ ಕುಮಾರರವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.30ರಿಂದ ರಸಿಕ ರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಗುರುಶಿಷ್ಯ – ಸಂಸ್ಕರಣೆ – ಸನ್ಮಾನ ಕಾರ್ಯಕ್ರಮ ಜರಗಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.ಮಾನವ ಹಕ್ಕುಗಳ ಆಯೋಗ ಬೆಂಗಳೂರು ಅಧ್ಯಕ್ಷ ಟಿ.ಶ್ಯಾಮ್ ಭಟ್ ರವರು ಹಿರಿಯ ಯಕ್ಷಗಾನ ಕಲಾವಿದ ಶಂಭು ಶರ್ಮರವರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ರಾಜಾ ಬಿ.ಎಸ್., ಜನರಲ್ ಮೆನೇಜರ್, ಕರ್ನಾಟಕ ಬ್ಯಾಂಕ್ ಲಿ. ಮಂಗಳೂರುರವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಗಂಟೆ 2.೦೦ ರಿಂದ ಯಕ್ಷಗಾನ ತಾಳಮದ್ದಳೆ – 2 ಕುಮಾರ ವಿಜಯ (ಕವಿ ಮುದ್ದಣ ವಿರಚಿತ ಪೌರಾಣಿಕ ಕಥಾನಕ): ಹಿಮ್ಮೇಳದಲ್ಲಿ ಭಾಗವತರು: ಕುರಿಯ ಗಣಪತಿ ಶಾಸ್ತ್ರಿ, ರವೀಂದ್ರ ಭಟ್ ಪದ್ಯಾಣ ಮೃದಂಗ & ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್ ಲಕ್ಷ್ಮೀನಾರಾಯಣ ಅಡೂರು, ರಾಮಮೂರ್ತಿ ಕುದ್ರಕೋಡ್ಲು, ಮಾ| ಅದ್ವೈತ್ ಕನ್ಯಾನ, ಚಕ್ರತಾಳ : ರಾಜೇಂದ್ರ ಅರ್ಥಧಾರಿಗಳು: ಸೂರಿಕುಮೇರಿ ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶಂಭು ಶರ್ಮ ವಿಟ್ಲ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗೇರು, ಪಶುಪತಿ ಶಾಸ್ತ್ರಿ, ಸೇರಾಜೆ ಸೀತಾರಾಮ ಭಟ್ಟ, ಡಾ| ಹರೀಶ್ ಜೋಷಿ ವಿಟ್ಲರವರು ಭಾಗವಹಿಸಲಿದ್ದಾರೆ ಎಂದು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಹಾಗೂ
ಯಕ್ಷರಂಗ ಪುತ್ತೂರು ಅಧ್ಯಕ್ಷ ಸೀತಾರಾಮ ಶಾಸ್ತ್ರಿ ಕಾಡೂರು ತಿಳಿಸಿದ್ದಾರೆ.