





ಪುತ್ತೂರು: ಸಮಾಜ ಕಲ್ಯಾಣ ಇಲಾಖೆ ಪುತ್ತೂರು ತಾಲೂಕು ಸಹಾಯಕ ನಿರ್ದೇಶಕಿಯಾಗಿ ಬಂಟ್ವಾಳದಿಂದ ವರ್ಗಾವಣೆಗೊಂಡಿರುವ ವಿನಯ ಕುಮಾರಿ ಕೆ ಬಿ. ಅವರು ಅಧಿಕಾರ ಸ್ವೀಕರಿಸಿದ್ದಾರೆ.


ಮಂಗಳೂರು ನಿವಾಸಿಯಾಗಿರುವ ವಿನಯ ಕುಮಾರಿಯವರು 2003ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸಮಾಜ ಕಲ್ಯಾಣ ಇಲಾಖೆಗೆ ನೇಮಕಗೊಂಡಿದ್ದರು. 2010 ರಲ್ಲಿ ದ.ಕ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ವರ್ಗಾವಣೆಗೊಂಡಿದ್ದರು. 2014ರಲ್ಲಿ ಖಾಯಂ ಕಚೇರಿ ಅಧೀಕ್ಷಕರಾಗಿ ಮುಂಭಡ್ತಿ ಪಡೆದ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ಮುಂದುವರಿಸಿದ್ದರು. 2015 ರಲ್ಲಿ ಬಂಟ್ವಾಳ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿ ವರ್ಗಾವಣೆಗೊಂಡಿದ್ದ ಅವರು ಇದೀಗ ಸಹಾಯಕ ನಿರ್ದೇಶಕಿಯಾಗಿ ಮುಂಭಡ್ತಿ ಪಡೆದು ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ.














