puttur: ಸುದಾನ ಶಾಲೆ ಮತ್ತು ಸುದಾನ ಪದವಿಪೂರ್ವ ಕಾಲೇಜು ಜಂಟಿಯಾಗಿ 69 ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಆಚರಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸುದಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ ಸಿ ಅವರು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಗಳ ಆರೋಹಣವನ್ನು ಮಾಡಿ, ಮಾತನಾಡಿ “ಯುವಜನರು ಕನ್ನಡದ ಬಗೆಗೆ ಒಲವು ಮತ್ತು ಶ್ರದ್ಧೆಯನ್ನು ಹೊಂದಿರಬೇಕು. ನಾಡು-ನುಡಿಯನ್ನು ಉಳಿಸಿ ಬೆಳೆಸುವ ಹೊಣೆಯನ್ನು ಅರಿತು ನಿರ್ವಹಿಸಬೇಕು” ಎಂದರು.
ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮಾತನಾಡಿ, “ಎಲ್ಲಾ ಭಾಷೆಗಳನ್ನು ಪ್ರೀತಿಸುವ ಜೊತೆಗೆ ತಾಯ್ನುಡಿ ಕನ್ನಡವನ್ನು ಕಡೆಗಣಿಸದೆ ಬೆಳೆಸಬೇಕು. ಅನ್ಯಭಾಷೆಗಳಿಂದ ಪಡೆದ ಅರಿವಿನಿಂದ ಕನ್ನಡ ನಾಡು-ನುಡಿಗೆ ಸೇವೆಯನ್ನು ಮಾಡಬೇಕು” ಎಂದರು. ವಿದ್ಯಾರ್ಥಿನಿ ಅನಘ ಕನ್ನಡ ಭಾಷೆಯ ಹಿರಿಮೆಯ ಬಗೆಗೆ ವಿವರಿಸಿದರು. ಮುಖ್ಯ ಸಹ ಶಿಕ್ಷಕಿ ಲವೀನ ರೋಸ್ಲೀನ್ ಹನ್ಸ್, ಸಂಯೋಜಕರಾದ ಪ್ರತಿಮಾ, ಗಾಯತ್ರಿ, ಅಮೃತವಾಣಿ ಮತ್ತು ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಸುವರ್ಣಾ, ಉಪನಿರ್ದೇಶಕಿ ಪ್ರತಿಭಾ ರೈ, ಲಹರಿ ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ತರ್ಷಿಣಿ ಮತ್ತು ಯಕ್ಷಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಭಿಜ್ಞಾ ಸ್ವಾಗತಿಸಿ, ವಿದ್ಯಾರ್ಥಿ ಸೃಜನ್ ವಂದಿಸಿದರು. ವಿದ್ಯಾರ್ಥಿಗಳಾದ ಶೀಬಾ ಮತ್ತು ಜಸಿತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭೆಯ ಬಳಿಕ ವಿದ್ಯಾರ್ಥಿನಿ ಧನ್ವಿಕಾ ಕನ್ನಡ ಗೀತೆ ಹಾಡಿದರು. ವಿದ್ಯಾರ್ಥಿಗಳು ಕನ್ನಡ ನಾಡಿನ ವೈಭವವನ್ನು ನೃತ್ಯದ ಮೂಲಕ ಪ್ರದರ್ಶಸಿದರು, ವಿದ್ಯಾರ್ಥಿಗಳಿಗೆ ನಡೆಸಿದ್ದ ಕನ್ನಡ ಪರ ಸ್ಪರ್ಧೆಯ ವಿಜೇತರಿಗೆ ಕನ್ನಡ ಪುಸ್ತಕವನ್ನು ಬಹುಮಾನವಾಗಿ ವಿತರಿಸಲಾಯಿತು. ಶಾಲಾ ಲಹರಿ ಸಾಹಿತ್ಯ ಸಂಘವು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿತ್ತು.