ನ.10: ಕಾವುನಲ್ಲಿ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

0

ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ. ಪುತ್ತೂರು ಇದರ ಕಾವು ಮಾಡ್ನೂರು ಗ್ರಾಮ ಸಮಿತಿಯ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ಮತ್ತು ದಂತ ತಪಾಸಣೆ ಶಿಬಿರವು ನ.10ರಂದು ಬೆಳಿಗ್ಗೆ ನನ್ಯ ಜನಮಂಗಲ ಸಭಾಭವನದಲ್ಲಿ ನಡೆಯಲಿದೆ.
ನಿಟ್ಟೆ ಜಸ್ಟಿಸ್ ಕೆ.ಎಸ್‌.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್(ರಿ.) ಗಾಂಧಿನಗರ ಮಂಗಳೂರುರವರು ಶಿಬಿರದಲ್ಲಿ ಸಹಕಾರ ನೀಡಲಿದ್ದಾರೆ.
ಬೆಳಿಗ್ಗೆ 9-00ರಿಂದ ಅಪರಾಹ್ನ 1-00ಗಂಟೆಯ ತನಕ ನಡೆಯಲಿರುವ ಶಿಬಿರದಲ್ಲಿ E.C.G 0 B.P, ಸಕ್ಕರೆ ಕಾಯಿಲೆ ತಪಾಸಣೆ, ಕಣ್ಣು ಪರೀಕ್ಷೆ ಹಾಗೂ ಉಚಿತ ಕನ್ನಡಕ, ದಂತ ಪರೀಕ್ಷೆ ಹಾಗೂ ಚಿಕಿತ್ಸೆ (Filling) ಎಲುಬು, ಚರ್ಮ ಹಾಗೂ ಮಕ್ಕಳ ವಿಭಾಗ,ಕಿವಿ, ಮೂಗು, ಗಂಟಲು (E.N.T) ತಪಾಸಣೆ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಉದ್ಘಾಟಿಸಲಿದ್ದು, ಪುತ್ತಿಲ ಪರಿವಾರ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ ಉಳಾಲುರವತು ಸಭಾಧ್ಯಕ್ಷತೆ ವಹಿಸಲಿದ್ದಾರೆ.ಸಂತೋಷ್ ಮಣಿಯಾಣಿ, ಅಧ್ಯಕ್ಷರು, ಅರಿಯಡ್ಕ ಗ್ರಾಮ ಪಂಚಾಯತ್, ಡಾ| ನವೀನ್ ಶಂಕರ, ಸರಯೂ ಕ್ಲಿನಿಕ್ ಕಾವು, ಅಮ್ಮಣ್ಣ ರೈ, ಮಾತೃಶ್ರೀ ಅರ್ಥ್ ಮೂವರ್ಸ್ ಕುಂಬ್ರ, ಚಂದ್ರಹಾಸ ವಕೀಲರು, ಈಶ್ವರಮಂಗಲ, ರವಿಕುಮಾ‌ರ್ ರೈ ಕೆದಂಬಾಡಿ, ಕಾರ್ಯದರ್ಶಿ, ಪುತ್ತಿಲ ಪರಿವಾರ, ನಹುಷ ಭಟ್ ಅಧ್ಯಕ್ಷರು, ಗೋ ಪೂಜಾ ಸಮಿತಿ ಕಾವು, ನಾರಾಯಣ ಆಚಾರ್ಯ ಮಳಿ ಹಿರಿಯ ಕರ ಸೇವಕ, ರವಿಚಂದ್ರ ಮಾಣಿಯಡ್ಕ ಧರ್ಮದರ್ಶಿ, ಚಾಮುಂಡೇಶ್ವರಿ ಕ್ಷೇತ್ರ ಕಾವು, ಸುನಿಲ್ ಬೋರ್ಕರ್ ಮುಂಡಕೊಚ್ಚಿ, ಸದಸ್ಯರು, ಪುತ್ತಿಲ ಪರಿವಾರ ಚಾರಿಟೇಬಲ್ ಟ್ರಸ್ಟ್ ಇವರುಗಳು ಉಪಸ್ಥಿತಿ ವಹಿಸಲಿದ್ದಾರೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here