ಪುಣಚ: ಬೆಳಿಯೂರುಕಟ್ಟೆ ಜ್ಯೇಷ್ಠ ಸ್ಟೀಲ್, ಅಲ್ಯುಮಿನಿಯಮ್ ಫ್ಯಾಭ್ರಿಕೇಷನ್ ಮಾಲಕ ನವೀನ್- ಶ್ವೇತಾ ದಂಪತಿ ಪುತ್ರಿ ರಿಧ್ವಿ ಅವರ ಪ್ರಥಮ ವರ್ಷದ ಹುಟ್ಟು ಹಬ್ಬ ಸಂಭ್ರಮಾಚರಣೆ ಬೆಳಿಯೂರುಕಟ್ಟೆ ಪನೆತ್ತಡ್ಕದಲ್ಲಿರುವ ಜ್ಯೇಷ್ಠ ನಿಲಯದಲ್ಲಿ ನ.11ರಂದು ನಡೆಯಿತು.
ಕೇಕ್ ಕತ್ತರಿಸಿ ಸಂಭ್ರಮಾಚರಣೆ, ಸಂಗೀತ ಗಾನ ಸಂಭ್ರಮ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ವಿಜ್ ಸ್ಪರ್ಧೆಯ ಮೂಲಕ ಮನೋರಂಜನಾ ಕಾರ್ಯಕ್ರಮ ನಡೆಯಿತು.
ರಿಧ್ವಿ ಅವರ ಅಜ್ಜಂದಿರಾದ ಆನಂದ ಪೂಜಾರಿ ಗುಂಡ್ಯಡ್ಕ, ಕೋಟ್ಯಪ್ಪ ಪೂಜಾರಿ ಪಾವೂರು, ಅಜ್ಜಿಯಂದಿರಾದ ಸುಶೀಲ ಗುಂಡ್ಯಡ್ಕ, ಶೀಲಾ ಪಾವೂರು, ಚಿಕ್ಕಪ್ಪಂದಿರಾದ ಪ್ರವೀಣ್, ಪ್ರಶಾಂತ್ ಗುಂಡ್ಯಡ್ಕ, ಚಿಕ್ಕಮ್ಮಂದಿರಾದ ಸ್ವಾತಿ, ದೀಪಿಕಾ, ಬೇಬಿ ಶಾರ್ವಿ ಹಾಗೂ ಕುಟುಂಬಸ್ಥರು ಬಂಧು ಮಿತ್ರರು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು. ರಿಧ್ವಿ ಅವರ ತಂದೆ ನವೀನ್, ತಾಯಿ ಶ್ವೇತಾ, ಸಹೋದರ ಜ್ಯೇಷ್ಠ ಅತಿಥಿಗಳನ್ನು ಹಾಗೂ ಬಂಧು ಮಿತ್ರರನ್ನು ಸ್ವಾಗತಿಸಿ ಸತ್ಕರಿಸಿದರು.