ಚಾರ್ವಾಕ ಪ್ರಾ.ಕೃ.ಪ.ಸಹಕಾರ ಸಂಘದ ಶತಮನೋತ್ಸವ – ದಾನಿಗಳ ನೆರವಿನೊಂದಿಗೆ ಬಡ ಕುಟುಂಬಕ್ಕೆ ಸೂರಿನ ಆಸರೆಗೆ ಚಾಲನೆ

0

ಬಡ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯ ಶ್ಲಾಘನೀಯ- ಮೇದಪ್ಪ ನಾವೂರು

ಕಾಣಿಯೂರು: ಕಡಬ ತಾಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾರ್ವಾಕ ಗ್ರಾಮದ ಅಜ್ಜೀಲು ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಮಳೆ, ಗಾಳಿ ಎನ್ನದೇ ಜೋಪಾಡಿಯೊಳಗೆ ಬದುಕು ನಡೆಸುತ್ತಿದ್ದ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಸುದೀರ್ಘ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದಲ್ಲಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಶತಮಾನೋತ್ಸವ ಸವಿ ನೆನಪಿಗಾಗಿ ದಾನಿಗಳ ನೆರವಿನೊಂದಿಗೆ ಮನೆ ನಿರ್ಮಾಣದ ಕಾರ್ಯಕ್ಕೆ ಮುಂದಾಗಿದ್ದು, ನೂತನ ಮನೆ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕಿನ ಯೋಜನಾಧಿಕಾರಿ ಮೇದಪ್ಪ ನಾವೂರು ಅವರು ನ 20ರಂದು ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿ, ಚಾರ್ವಾಕ ಪ್ರಾ.ಕೃ.ಪ. ಸ. ಸಂಘದ ಶತಮಾನದ ಸವಿನೆನಪಿಗಾಗಿ ದಾನಿಗಳ ನೆರವಿನೊಂದಿಗೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ. ನೂತನ ಮನೆಯಲ್ಲಿ ಕುಟುಂಬವು ಸಂತಸದ ಜೀವನ ನಡೆಸುವಂತಾಗಲಿ ಎಂದು ಶುಭಹಾರೈಸಿದರು. ಕಾಣಿಯೂರು ಗ್ರಾ. ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಕಾಣಿಯೂರು ಗ್ರಾ. ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಸುಲೋಚನಾ ಮಿಯೋಳ್ಪೆ, ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ನಿರ್ದೇಶಕರಾದ ವಿಶ್ವನಾಥ ದೇವಿನಗರ, ಪರಮೇಶ್ವರ ಅನಿಲ, ಸುಂದರ ದೇವಸ್ಯ, ದಿವಾಕರ ಮರಕ್ಕಡ, ಲೋಕೇಶ್ ಅತಾಜೆ, ಶೀಲಾವತಿ ಮುಗರಂಜ, ರತ್ನಾವತಿ ಮುದುವ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ ಚಾರ್ವಾಕ, ಉಪಾಧ್ಯಕ್ಷ ಕುಸುಮಾಧರ ಗೌಡ ಇಡ್ಯಡ್ಕ, ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ನಿರ್ದೇಶಕರಾದ ವಾಸಪ್ಪ ಗೌಡ ಖಂಡಿಗ, ರಾಮಚಂದ್ರ ಗೌಡ ಕೋಲ್ಪೆ, ಕುಸುಮಾವತಿ ಕಳ, ಕಾಂತ ಪರವ, ಮಾಜಿ ನಿರ್ದೇಶಕ ಸದಾಶಿವ ಮಿಯೋಳ್ಪೆ, ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ನಾಣಿಲ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ಕುಂಬ್ಲಾಡಿ, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಜತ್ತಪ್ಪ ಗೌಡ ಉದ್ಲಡ್ಡ, ಕಾಣಿಯೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ನಾಣಿಲ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ಖಂಡಿಗ, ಗ್ರಾ. ಪಂ. ಮಾಜಿ ಸದಸ್ಯ ದಯಾನಂದ ಅಂಬುಲ, ಸಿ.ಎ ಬ್ಯಾಂಕ್ ಸಿಬ್ಬಂದಿ ವೇಣುಗೋಪಾಲ್ ಉಪ್ಪಡ್ಕ, ಮನೆಯ ಸೋಮಶೇಖರ್, ಮತ್ತಿತರರು ಉಪಸ್ಥಿತರಿದ್ದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ ಕಾರ್ಯಕ್ರಮ ನಿರೂಪಿಸಿದರು.

ಶತಮಾನೋತ್ಸವದ ಪ್ರಯುಕ್ತ ಬಡ ಕುಟುಂಬವೊಂದಕ್ಕೆ ಆಸರೆ ನೀಡುವ ಉದ್ದೇಶ

ಶತಮಾನೋತ್ಸವದ ಹೊಸ್ತಿಲಲ್ಲಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶತಮಾನೋತ್ಸವದ ಸವಿ ನೆನಪಿಗಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಸಂಘದ ವತಿಯಿಂದ ದಾನಿಗಳ ನೆರವಿನೊಂದಿಗೆ ಬಡ ಕುಟುಂಬವೊಂದಕ್ಕೆ ಆಸರೆಯಾಗಿ ನಿಲ್ಲಬೇಕು ಎಂಬ ದೃಷ್ಟಿಕೋಣವನ್ನು ಇಟ್ಟುಕೊಂಡು ನೂತನ ಮನೆ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗುತ್ತಿದೆ.
ಗಣೇಶ್ ಉದನಡ್ಕ
ಅಧ್ಯಕ್ಷರು, ಚಾರ್ವಾಕ ಪ್ರಾ. ಕೃ. ಪ. ಸಹಕಾರ ಸಂಘ

LEAVE A REPLY

Please enter your comment!
Please enter your name here